ವಾರಣಾಸಿ: ಹಿಂದೂಗಳ ಪವಿತ್ರ ಕ್ಷೇತ್ರ ಕಾಶಿ ವಿಶ್ವನಾಥ ಮಂದಿರ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿ ಬಗ್ಗೆ ವೈಜ್ಞಾನಿಕ ಸಮೀಕ್ಷಾ ವರದಿ ಇದೀಗ ಬಹಿರಂಗಗೊಂಡಿದೆ. ಜ್ಞಾನವಾಪಿ ಮಸೀದಿ ಜಾಗದಲ್ಲಿ ಮೊದಲು ಹಿಂದೂ ದೇವಾಲಯ ಇತ್ತು ಅಂತ ಪುರಾತತ್ವ ಸರ್ವೇಕ್ಷಣಾ ವರದಿ (archaeological survey report) ಹೇಳಿದೆ. ಇದರೊಂದಿಗೆ ಅಲ್ಲಿನ ದೇವಾಲಯದ ಕುರುಹುಗಳಲ್ಲಿ ಕನ್ನಡ ಭಾಷೆಯ ಬರಹಗಳು ಸಿಕ್ಕಿವೆ. ಇದರೊಂದಿಗೆ ಅತ್ತ ಅಯೋಧ್ಯೆ ರಾಮಮಂದಿರದಲ್ಲಿ ರಾಮನ ಮೂರ್ತಿಯಿಂದ ಹಿಡಿದು ಹಲವು ಬಗೆಯಲ್ಲಿ ಕರ್ನಾಟಕದ ನಂಟು ಇದ್ದರೆ, ಇತ್ತ ಜ್ಞಾನವಾಪಿಗೂ ಕರುನಾಡ ನಂಟು ಇರುವ ವಿಚಾರ ಬೆಳಕಿಗೆ ಬಂದಿದೆ.
ರಾಮನ ಜೊತೆ ಶಿವನಿಗೂ ಕರುನಾಡ ನಂಟು!
ಮೊನ್ನೆ ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠೆ ಪೂರ್ಣಗೊಂಡಿದೆ. ಅಲ್ಲಿನ ಬಾಲಕ ಶ್ರೀರಾಮನ ಮೂರ್ತಿ ಮಾಡಿದ್ದು ಕರುನಾಡಿನ ಶಿಲ್ಪಿ ಅರುಣ್ ಯೋಗಿರಾಜ್. ಇದಕ್ಕೂ ಮುನ್ನ ಹಲವು ಕನ್ನಡಿಗರು ರಾಮ ಜನ್ಮಭೂಮಿ ಹೋರಾಟದಲ್ಲಿ ಇದ್ದರು. ರಾಮಮಂದಿರ ನಿರ್ಮಾಣದ ವೇಳೆ ಅನೇಕ ಕನ್ನಡಿಗರು ಕೆಲಸ ಮಾಡಿದ್ದಾರೆ. ಇದೀಗ ಜ್ಞಾನವಾಪಿಯಲ್ಲೂ ಕನ್ನಡ ಬರಹ ಪತ್ತೆಯಾಗಿದೆ.
ಜ್ಞಾನವಾಪಿಯೊಳಗೆ ಕನ್ನಡ ಲಿಪಿ ಪತ್ತೆ
ಪುರಾತತ್ವ ಸರ್ವೇಕ್ಷಣಾ ವರದಿ ಬಹಿರಂಗಗೊಂಡಿದೆ. ಇದರಲ್ಲಿ ಜ್ಞಾನವಾಪಿಯೊಳಗೆ ಕನ್ನಡ ಬರಹಗಳು ಪತ್ತೆಯಾಗಿವೆ. ಹಲವು ಶಾಸನಗಳು, ಹಲವು ಪ್ರಮುಖ ಪತ್ರಗಳು ಸಿಕ್ಕಿವೆ. ಅವುಗಳಲ್ಲಿ ಕನ್ನಡ ಬರಹ ಪತ್ತೆಯಾಗಿದೆ. ಇದರ ಜೊತೆಗೆ ತೆಲುಗು ಹಾಗೂ ದೇವನಾಗರಿ ಲಿಪಿಗಳ ಬರಹಗಳೂ ಕಂಡು ಬಂದಿವೆ.
ಹಿಂದೂಗಳ ಪವಿತ್ರ ಕ್ಷೇತ್ರ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿ ಬಗ್ಗೆ ವೈಜ್ಞಾನಿಕ ಸಮೀಕ್ಷಾ ವರದಿ ಇದೀಗ ಬಹಿರಂಗಗೊಂಡಿದೆ. ಜ್ಞಾನವಾಪಿ ಮಸೀದಿ ಜಾಗದಲ್ಲಿ ಮೊದಲು ಹಿಂದೂ ದೇವಾಲಯ ಇತ್ತು ಅಂತ ಪುರಾತತ್ವ ಸರ್ವೇಕ್ಷಣಾ ವರದಿ ಹೇಳಿದೆ.
ಹಿಂದೂ ಪರ ವಕೀಲ ಹೇಳಿದ್ದೇನು?
ಜ್ಞಾನವಾಪಿ ಕೇಸ್ನಲ್ಲಿ ಹಿಂದೂ ಸಂಘಟನೆಗಳ ಪರ ವಾದ ಮಂಡಿಸುತ್ತಿರುವ ವಿಷ್ಣು ಶಂಕರ್ ಜೈನ್ ಸುದ್ದಿಗೋಷ್ಠಿ ನಡೆಸಿ, ಈ ವಿಚಾರ ತಿಳಿಸಿದ್ದಾರೆ. ಎಎಸ್ಐ ಸಮೀಕ್ಷೆ ಸಮಯದಲ್ಲಿ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ಹಲವಾರು ಶಾಸನಗಳನ್ನು ಗುರುತಿಸಿ, ಅಧ್ಯಯನ ನಡೆಸಲಾಗಿದೆ. ಪ್ರಸ್ತುತ ಸಮೀಕ್ಷೆಯಲ್ಲಿ ಒಟ್ಟು 34 ಶಾಸನಗಳನ್ನು ದಾಖಲಿಸಲಾಗಿದೆ ಮತ್ತು 32 ಮುದ್ರೆಯ ಪುಟಗಳನ್ನು ಅಧ್ಯಯನ ನಡೆಸಲಾಗಿದೆ ಅಂತ ಹೇಳಿದ್ದಾರೆ.
ಹಿಂದಿನ ಶಾಸನಗಳ ಮರುಬಳಕೆಯು ಹಿಂದಿನ ರಚನೆಗಳನ್ನು ನಾಶಪಡಿಸಿದೆ ಎಂದು ಸೂಚಿಸುತ್ತದೆ. ಅವುಗಳ ಭಾಗಗಳನ್ನು ಅಸ್ತಿತ್ವದಲ್ಲಿರುವ ರಚನೆಯ ನಿರ್ಮಾಣ ದುರಸ್ತಿಯಲ್ಲಿ ಮರುಬಳಕೆ ಮಾಡಲಾಯಿತು. ಜನಾರ್ದನ, ರುದ್ರ ಮತ್ತು ಉಮೇಶ್ವರ ಮುಂತಾದ ಮೂರು ದೇವತೆಗಳ ಹೆಸರುಗಳು ಈ ಶಾಸನಗಳಲ್ಲಿ ಕಂಡುಬರುತ್ತವೆ ಅಂತ ವಕೀಲರು ಮಾಹಿತಿ ನೀಡಿದ್ರು.