ವಿಮಾನದ ಪೈಲಟ್ ಗಳು ಗಡ್ಡ ಬಿಡುವಂತಿಲ್ಲ, ಏರ್‌ಲೈನ್ಸ್ ಗಳ ಈ ನಿರ್ಧಾರ ಹಿಂದೆಯೂ ಇದೆ ಒಂದು ಗಂಭೀರ ಸಮಸ್ಯೆ ಹಾಗು ಕಾರಣ

in Kannada News/News/ಕನ್ನಡ ಮಾಹಿತಿ 183 views

ಜನರು ವಿಮಾನಗಳಲ್ಲಿ ಸಂಚರಿಸುವಾಗ ಪೈಲಟ್‌ಗಳನ್ನು ಗಮನಿಸಿರ ಬಹುದು. ಬಹುತೇಕ ಪೈಲಟ್‌ಗಳು ತಮ್ಮ ಮುಖವನ್ನು ಶೇವ್ ಮಾಡಿರುತ್ತಾರೆ. ಪೈಲಟ್‌ಗಳು ಗಡ್ಡ ಬಿಡಲು ವಿಮಾನಯಾನ ಕಂಪನಿಗಳು ಅನುಮತಿ ನೀಡುವುದಿಲ್ಲ.

Advertisement

ಆದರೆ ಕೆಲವು ಕೆಲವು ವಿಮಾನಯಾನ ಕಂಪನಿಗಳು ಮಾತ್ರ ತಮ್ಮ ಪೈಲಟ್‌ಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಗಡ್ಡ ಬಿಡಲು ಅನುಮತಿ ನೀಡುತ್ತವೆ. ಯಾವ ಕಾರಣಕ್ಕೆ ವಿಮಾನಯಾನ ಕಂಪನಿಗಳು ಪೈಲಟ್‌ಗಳಿಗೆ ಗಡ್ಡ ಬಿಡಲು ಅನುಮತಿ ನೀಡುವುದಿಲ್ಲವೆಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿಮಾನಗಳು 12,500 ಅಡಿಗಳಿಗಿಂತ ಹೆಚ್ಚು ಮೇಲೆ ಹಾರಾಟ ನಡೆಸುವಾಗ ಯಾವುದೇ ಸಮಯದಲ್ಲಿ ಗಾಳಿಯ ಒತ್ತಡ ಇಳಿಯಬಹುದು. ಆ ಸಮಯದಲ್ಲಿ ಆಕ್ಸಿಜನ್ ಪೂರೈಕೆಗೆ ಅಡಚಣೆಯಾದರೆ ದೊಡ್ಡ ಅಪಾಯ ಎದುರಾಗುತ್ತದೆ.

ಗಡ್ಡವು ದೊಡ್ಡದಾಗಿದ್ದರೆ ಮಾಸ್ಕ್’ಗಳು ಪೈಲಟ್‌ಗಳ ಮುಖಕ್ಕೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಇದರಿಂದ ಪೈಲಟ್‌ಗಳಿಗೆ ಆಕ್ಸಿಜನ್ ಸಿಗದಂತಾಗುತ್ತದೆ. ಈ ಅಂಶವನ್ನು ಪರಿಗಣಿಸಿ ಹಲವು ವಿಮಾನಯಾನ ಕಂಪನಿಗಳು ಪೈಲಟ್‌ಗಳಿಗೆ ಗಡ್ಡ ಬಿಡಲು ಅನುಮತಿ ನೀಡುವುದಿಲ್ಲ.

ಈ ಗುಂಪಿನಲ್ಲಿದ್ದ ಯಾರಿಗೂ ಗಡ್ಡವಿರಲಿಲ್ಲ. ಒಬ್ಬರು ಅಲ್ಪ ಪ್ರಮಾಣದ ಗಡ್ಡ ಹಾಗೂ ಮತ್ತೊಬ್ಬರು ಹೆಚ್ಚು ಗಡ್ಡವನ್ನು ಅಂಟಿಸಿಕೊಂಡು ಆಕ್ಸಿಜನ್ ಮಾಸ್ಕ್ ಬಳಸಿದಾಗ ಆಕ್ಸಿಜನ್ ಮಟ್ಟ ಎಷ್ಟಿರುತ್ತದೆ ಎಂಬುದನ್ನು ಪರೀಕ್ಷಿಸಿದರು.

ಆದರೆ ಹಲವು ವರ್ಷಗಳಿಂದ ಜಾರಿಯಲ್ಲಿರುವ ನಿಯಮಗಳನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲವೆಂದು ವಿಮಾನಯಾನ ತಜ್ಞರು ಹೇಳಿದ್ದಾರೆ. ಈ ನಿಯಮಗಳನ್ನು ಬದಲಿಸುವ ಮುನ್ನ ಮತ್ತಷ್ಟು ಸಂಶೋಧನೆ ನಡೆಸಬೇಕು ಎಂಬುದು ವಿಮಾನಯಾನ ತಜ್ಞರ ಅಭಿಪ್ರಾಯ.

ಭವಿಷ್ಯದಲ್ಲಿ ಈ ಪರಿಸ್ಥಿತಿ ಬದಲಾಗುವ ನಿರೀಕ್ಷೆಗಳಿವೆ. ಇದಕ್ಕೆ ಏರ್ ಕೆನಡಾ ಕಂಪನಿ ಉತ್ತಮ ಉದಾಹರಣೆಯಾಗಿದೆ. ಇಂತಹ ಹಲವು ಕಂಪನಿಗಳು ತಮ್ಮ ಪೈಲಟ್‌ಗಳಿಗೆ ಗಡ್ಡ ಬಿಡಲು ಅನುಮತಿ ನೀಡುತ್ತವೆ ಎಂದು ನಿರೀಕ್ಷಿಸಲಾಗಿದೆ.

ಆದರೂ ಕೆಲವು ಪೈಲಟ್‌ಗಳು ತಮ್ಮ ಗಡ್ಡ ಹಾಗೂ ಮೀಸೆಗಳನ್ನು ಟ್ರಿಮ್ ಮಾಡುತ್ತಾರೆ. ಇನ್ನೂ ಕೆಲವು ಪೈಲಟ್‌ಗಳು ದೊಡ್ಡದಾಗಿ ಮೀಸೆ ಬಿಡುವುದನ್ನು ಕಾಣಬಹುದು.

Advertisement
Share this on...