“ಶೃದ್ಧಾಳನ್ನ ಬರ್ಬರವಾಗಿ ಕೊಂ-ದು ಹಾಕಿದ್ದು ನಾನೇ, ಯಾಕಂದ್ರೆ ಅವಳು….”: ಕೋರ್ಟ್‌ನಲ್ಲಿ ಅಫ್ತಾಬ್ ಬಾಯ್ಬಿಟ್ಟ ಸ್ಪೋಟಕ ಮಾಹಿತಿ ಕೇಳಿ ಬೆಚ್ಚಿಬಿದ್ದ ಪೋಲಿಸರು

in Uncategorized 1,378 views

Shraddha Murder Case: ಶ್ರದ್ಧಾ ವಾಕರ್ ಹ-ತ್ಯೆ ಪ್ರಕರಣದಲ್ಲಿ ಒಂದು ದೊಡ್ಡ ಅಪ್ಡೇಟ್ ಬೆಳಕಿಗೆ ಬಂದಿದೆ. ಈ ವೇಳೆ ಆರೋಪಿ ಅಫ್ತಾಬ್ ನ್ಯಾಯಾಲಯದಲ್ಲಿ ಸತ್ಯ ಒಪ್ಪಿಕೊಂಡಿದ್ದಾನೆ.

ನವದೆಹಲಿ: ಶ್ರದ್ಧಾ ವಾಕರ್ ಹ-ತ್ಯೆ ಪ್ರಕರಣದಲ್ಲಿ ಒಂದು ದೊಡ್ಡ ಅಪ್ಡೇಟ್ ಬೆಳಕಿಗೆ ಬಂದಿದೆ. ಈ ವೇಳೆ ಆರೋಪಿ ಅಫ್ತಾಬ್ ನ್ಯಾಯಾಲಯದಲ್ಲಿ ಸತ್ಯ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಪ್ರತಿದಿನ ಹೊಸ ಮತ್ತು ಆಘಾತಕಾರಿ ವಿಷಯಗಳು ಬೆಳಕಿಗೆ ಬರುತ್ತಿವೆ. ಇಂದು ನ್ಯಾಯಾಧೀಶರ ಮುಂದೆ ಆರೋಪಿ ಅಫ್ತಾಬ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಕೋಪದ ಭರದಲ್ಲಿ ಶ್ರದ್ಧಾಳನ್ನು ಕೊಂದಿರುವುದಾಗಿ ಹೇಳಿದ್ದಾನೆ.

Advertisement

ಶ್ರದ್ಧಾ ಮತ್ತು ಅಫ್ತಾಬ್ ಇಬ್ಬರೂ ಲಿವ್ ಇನ್‌ ರಿಲೇಶನ್‌ಶಿಪ್ ನಲ್ಲಿ ವಾಸಿಸುತ್ತಿದ್ದರು. ಶ್ರದ್ಧಾ ಮನೆಯವರು ಈ ಸಂಬಂಧವನ್ನು ಒಪ್ಪಿರಲಿಲ್ಲ, ಇದರಿಂದಾಗಿ ಇಬ್ಬರೂ ಹಲವು ವರ್ಷಗಳ ಹಿಂದೆಯೇ ತಮ್ಮ ಮನೆಯನ್ನು ತೊರೆದಿದ್ದರು. ಅಂದಿನಿಂದ ಇಬ್ಬರೂ ದೆಹಲಿಯ ಮೆಹ್ರಾಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು ಎಂದು ಹೇಳಲಾಗಿದೆ. ಇಬ್ಬರಿಗೂ ಆಗಾಗ ಜಗಳ ನಡೆಯುತ್ತಿತ್ತು. ಈ ಕಾರಣಕ್ಕಾಗಿ ಅಫ್ತಾಬ್ ಶ್ರದ್ಧಾಳನ್ನು ಸಾಯಿಸಿದ್ದಾನೆ. ಜೈಲಿಗೆ ಹೋಗುವುದನ್ನು ತಪ್ಪಿಸಲು ಆರೋಪಿ ಅಫ್ತಾಬ್ ಮಾಡಿರುವ ಕೆಲಸ ಮಾತ್ರ ಭೀಕರವಾಗಿತ್ತು. ಅವನು ಶ್ರದ್ಧಾಳ ದೇ-ಹ-ವನ್ನು ಸಣ್ಣ ತುಂ-ಡುಗಳಾಗಿ ಕ-ತ್ತ-ರಿಸಿ ಫ್ರಿಡ್ಜ್ನಲ್ಲಿಟ್ಟು ನಿಧಾನವಾಗಿ ಆ ತುಂಡುಗಳನ್ನು ವಿಲೇವಾರಿ ಮಾಡುತ್ತಿದ್ದನು.

ಶ್ರದ್ಧಾ ಹ-ತ್ಯೆ ಪ್ರಕರಣದಲ್ಲಿ ಆರೋಪಿ ಅಫ್ತಾಬ್ ಪೂನಾವಾಲಾ ಪೊಲೀಸ್ ಕಸ್ಟಡಿಯನ್ನು 4 ದಿನಗಳ ಕಾಲ ವಿಸ್ತರಿಸಲಾಗಿದೆ. ಇಂದು ನಡೆದ ವೀಡಿಯೋ ಕಾನ್ಫರೆನ್ಸ್ ವೇಳೆ ಅಫ್ತಾಬ್ ಸಿಟ್ಟಿನ ಭರದಲ್ಲಿ ಕೊ-ಲೆ ಮಾಡಿರುವುದಾಗಿ ನ್ಯಾಯಾಧೀಶರ ಮುಂದೆ ಒಪ್ಪಿಕೊಂಡಿದ್ದಾನೆ. ದಿಲ್ಲಿಯ ಸಾಕೆಟ್ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ‘ನಾನೇನು ಮಾಡಿದ್ದೇನೋ ಅದು ಕೋಪದಲ್ಲಿ ಮಾಡಿದ್ದೇನೆ’ ಎಂದು ಹೇಳಿರುವ ಅಫ್ತಾಬ್ ಶ್ರದ್ಧಾಳನ್ನ ಕೊ-ಲೆ ಮಾಡಿರುವುದಾಗಿ ಮಾತ್ರ ಒಪ್ಪಿಕೊಂಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಏನೇ ಆಗಿದ್ದರೂ ಅದು ಸಿಟ್ಟಿನಲ್ಲಿ ನಡೆದಿದೆ ಎಂದು ಹೇಳಿದ್ದಾನೆ. ಅಫ್ತಾಬ್ ವಕೀಲರ ಪ್ರಕಾರ, ನ್ಯಾಯಾಲಯವು ಈ ಹೇಳಿಕೆಯನ್ನು ತನ್ನ ದಾಖಲೆಯಲ್ಲಿ ತೆಗೆದುಕೊಂಡಿಲ್ಲ. ವರದಿಯ ಪ್ರಕಾರ, ಪಾಲಿಗ್ರಫಿ ಟೆಸ್ಟ್ ಗೂ ಅಫ್ತಾಬ್ ಒಪ್ಪಿಗೆ ನೀಡಿದ್ದಾನೆ. ಇದಾದ ಬಳಿಕ ನ್ಯಾಯಾಲಯ ಪರೀಕ್ಷೆಗೆ ಅನುಮತಿ ನೀಡಿತ್ತು.

ಒಟ್ಟಾರೆಯಾಗಿ 14 ದಿನಗಳ ಕಸ್ಟಡಿಗೆ ತೆಗೆದುಕೊಳ್ಳಬಹುದು. 5-5 ದಿನಗಳವರೆಗೆ ಎರಡು ಬಾರಿ ಕಸ್ಟಡಿ ತೆಗೆದುಕೊಳ್ಳಲಾಗಿದೆ. ಇಂದು ಮತ್ತೆ 4 ದಿನಗಳ ಕಸ್ಟಡಿ ನೀಡಲಾಗಿದೆ. ಈಗ ಈ ಸಮಯದಲ್ಲಿ ಪಾಲಿಗ್ರಾಫಿ ಟೆಸ್ಟ್ ಮತ್ತು ನಂತರ ನಾರ್ಕೋ ಟೆಸ್ಟ್ ನಡೆಯಲಿದೆ. ಈ ವೇಳೆ ಪೊಲೀಸರ ಮುಂದಿರುವ ಸವಾಲು ಏನೆಂದರೆ, ಈ ನಾಲ್ಕು ದಿನಗಳಲ್ಲಿ ಅಫ್ತಾಬ್ ಬಾಯಿಂದ ಎಲ್ಲ ರಹಸ್ಯಗಳನ್ನು ಹೊರತೆಗೆಯಬೇಕು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಬೇಕು.

ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಅಫ್ತಾಬ್?

ಅಫ್ತಾಬ್ ನ್ಯಾಯಾಲಯದಲ್ಲಿ ಯಾವ ‘Heat of moment’ ಕುರಿತು ಮಾತನಾಡಿದ್ದಾನೋ ಅದನ್ನ ನೋಡಿದರೆ ಆತ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವ ಸಾಧ್ಯತೆಯೂ ಇದೆ. ಇದರರ್ಥ ಆತ ತುಂಬಾ ಕೋಪಗೊಂಡಿದ್ದರಿಂದ ಯೋಚಿಸದೆ ಏನೋ ಮಾಡಿದ್ದೀನಿ ಎಂದರ್ಥ. ಆತ ಅದಕ್ಕೆ ಕಲ್ಪಿತ ನರಹ-ತ್ಯೆ-ಯ ರೂಪ ನೀಡುತ್ತಿದ್ದಾನೆ. ಮೇ 18ರ ರಾತ್ರಿ ಅಫ್ತಾಬ್ ಮತ್ತು ಶ್ರದ್ಧಾ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿತ್ತು ಎಂದು ಮೊದಲಿನಿಂದಲೂ ಹೇಳಲಾಗುತ್ತಿದೆ. ಅಫ್ತಾಬ್ ಪ್ರಕಾರ, ಶ್ರದ್ಧಾ ಅವನ ಮೇಲೆ ಯಾವುದೋ ವಸ್ತುವನ್ನ ಎಸೆದಿದ್ದಳು, ಇದಾದ ಬಳಿಕ ಕೋಪಗೊಂಡು ಅಫ್ತಾಬ್ ಆಕೆಯ ಕಡೆಗೆ ಓಡಿದನು. ಶ್ರದ್ಧಾಳ ದೇಹ ಶಾಂತವಾಗುವವರೆಗೂ ಕತ್ತು ಹಿಸುಕುತ್ತಲೇ ಇದ್ದ.

ನನಗೆ ಅದರ ಬಗ್ಗೆ ಅಷ್ಟು ನೆನಪಿಲ್ಲ ಎಂದ ಅಫ್ತಾಬ್

ಸಾಕ್ಷ್ಯಾಧಾರಗಳಿಗಾಗಿ ಪೊಲೀಸರು 14 ವಿವಿಧ ತಂಡಗಳನ್ನು ನಿಯೋಜಿಸಿದ್ದಾರೆ. ಘಟನೆ ನಡೆದು 6 ತಿಂಗಳಾದ್ದರಿಂದ ಹಲವು ವಿಷಯಗಳು ನೆನಪಾಗುತ್ತಿಲ್ಲ ಎಂದು ಅಫ್ತಾಬ್ ಹೇಳಿದ್ದಾನೆ. ಮ್ಯಾಪ್ ತೋರಿಸಿ ಆತ ಸಾಕ್ಷ್ಯವನ್ನು (ಆಯುಧಗಳು ಇತ್ಯಾದಿ) ಎಲ್ಲಿ ಎಸೆದಿದ್ದಾನೆ ಎಂದು ಹೇಳಿದ್ದಾನೆ. ಮ್ಯಾಪ್ ನಲ್ಲೇ ಆತ ಕೆರೆಯ ಬಗ್ಗೆಯೂ ಹೇಳಿದ್ದಾನೆ. ಶ್ರದ್ಧಾಳ ತಲೆಬುರುಡೆಯನ್ನು ಕೆರೆಯ ಬಳಿ ಎಸೆದಿರುವುದಾಗಿ ಅಫ್ತಾಬ್ ಇಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾನೆ. ದವಡೆಯ ಒಂದು ಭಾಗವೂ ಪತ್ತೆಯಾಗಿದ್ದು, ಇದು ಶ್ರದ್ಧಾಳದ್ದೋ ಅಥವಾ ಬೇರೆಯವರದ್ದೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಲ್ಯಾಬ್‌ಗೆ ಕಳುಹಿಸಲಾಗಿದೆ.

Advertisement
Share this on...