ಶ್ರೀಲಂಕಾದೆದುರು ಹೀನಾಯವಾಗಿ ಸೋತ ಪಾಕಿಸ್ತಾನ: ಭಾರತದ ಪತ್ರಕರ್ತನ ಜೊತೆ ಅಸಭ್ಯವಾಗಿ ವರ್ತಿಸಿದ ರಮೀಜ್ ರಾಜಾ (PCB ಅಧ್ಯಕ್ಷ), ವಿಡಿಯೋ ವೈರಲ್

in Uncategorized 207 views

ಭಾನುವಾರ (ಸೆಪ್ಟೆಂಬರ್ 11, 2022) ದುಬೈನಲ್ಲಿ ನಡೆದ ಏಷ್ಯಾ ಕಪ್ 2022 ಪ್ರಶಸ್ತಿಯನ್ನು ಶ್ರೀಲಂಕಾ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಫೈನಲ್‌ನಲ್ಲಿ ಪಾಕಿಸ್ತಾನವನ್ನು 23 ರನ್‌ಗಳಿಂದ ಸೋಲಿಸಿದ ಶ್ರೀಲಂಕಾ ಆರನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೇ ವೇಳೆ ಪಾಕಿಸ್ತಾನದ ಚಾಂಪಿಯನ್ ಆಗುವ ಕನಸು ಭಗ್ನವಾಯಿತು. ಏತನ್ಮಧ್ಯೆ, ಪಾಕಿಸ್ತಾನದ ಸೋಲಿನಿಂದ ಅಸಮಾಧಾನಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಭಾರತೀಯ ಪತ್ರಕರ್ತರೊಬ್ಬರ ಫೋನ್ ಕಸಿದುಕೊಳ್ಳುತ್ತಿರುವುದು ಕಂಡುಬಂದಿದೆ.

Advertisement

ವಾಸ್ತವವಾಗಿ, ಪಾಕಿಸ್ತಾನದ ಸೋಲಿನ ನಂತರ, ರಮೀಜ್ ರಾಜಾ ಸ್ಟೇಡಿಯಂನ ಹೊರಗೆ ಹಾಜರಿದ್ದ ಪತ್ರಕರ್ತರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ, ಭಾರತೀಯ ಪತ್ರಕರ್ತ ರೋಹಿತ್ ಜುಗ್ಲಾನ್ ಅವರು ಈ ಸೋಲಿನಿಂದ ತುಂಬಾ ಅಸಮಾಧಾನಗೊಂಡಿರುವ ಪಾಕಿಸ್ತಾನದ ಜನರಿಗೆ ಏನಾದರೂ ಸಂದೇಶವನ್ನು ನೀಡುವಿರಾ? ಎಂದು ಕೇಳಿದರು. ಇದಕ್ಕೆ ರಮೀಜ್ ರಾಜಾ, “ನೀವು ಭಾರತ, ಆದ್ದರಿಂದ ಈಗ ನೀವು ಪಾಕಿಸ್ತಾನ ಸೋತಿದ್ದಕ್ಕೆ ನಿಮಗಂತೂ ಖುಷಿ ಆಗೇ ಆಗುತ್ತೆ” ಎಂದು ಹೇಳಿದರು.

ಹೀಗೆ ಹೇಳುತ್ತಾ ಪತ್ರಕರ್ತರ ಫೋನ್ ಕಿತ್ತುಕೊಂಡರು. ಆದರೆ, ಇದಾದ ಬಳಿಕ ಮತ್ತೊಬ್ಬ ಪತ್ರಕರ್ತನ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರಿಸಿದ ಅವರು, ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಗೆ ಕೈ ಹಿಂದಕ್ಕೆ ಹಾಕಿ ಕ್ಯಾಮರಾದಿಂದ ದೂರ ಸರಿಯುವಂತೆ ಹೇಳಿದರು.

ಪತ್ರಕರ್ತ ರೋಹಿತ್ ಜುಗ್ಲಾನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳುತ್ತಾ, “ನನ್ನ ಪ್ರಶ್ನೆ ತಪ್ಪಾಗಿದೆಯೇ – ಪಾಕಿಸ್ತಾನದ ಅಭಿಮಾನಿಗಳು ನಿರಾಶರಾಗಿಲ್ಲವೇ? ಅವರು (ರಮೀಜ್ ರಾಜಾ) ಮಾಡಿದ್ದು ತುಂಬಾ ತಪ್ಪಾಗಿತ್ತು. ಮಂಡಳಿಯ ಅಧ್ಯಕ್ಷರಾಗಿರುವ ನೀವು ನನ್ನ ಫೋನ್ ಕಸಿದುಕೊಳ್ಳಬಾರದಿತ್ತು” ಎಂದು ಬರೆದುಕೊಂಡಿದ್ದಾರೆ.

ರಮೀಜ್ ರಾಜಾ ವಿರುದ್ಧ ಕೆಂಡಾಮಂಡಲರಾದ ಇಂಡಿಯನ್ ಯೂಸರ್ಸ್

ಈ ಬಗ್ಗೆ ಸುಶಾಂತ್ ಮೆಹ್ತಾ ಎಂಬ ಯೂಸರ್, “ನೀವು ನಮ್ಮ ವರದಿಗಾರರ ಫೋನ್ ಅನ್ನು ಹೇಗೆ ಕಸಿದುಕೊಳ್ಳುತ್ತೀರಿ? ನಿಮ್ಮ ನಾಯಕತ್ವದ ಬಗ್ಗೆ ಪಾಕಿಸ್ತಾನಿಗಳು ತೀವ್ರ ನಿರಾಶೆಗೊಂಡಿದ್ದಾರೆ ಎಂಬ ಸತ್ಯವನ್ನು ನೀವು ಏಕೆ ಒಪ್ಪಿಕೊಳ್ಳುವುದಿಲ್ಲ. ರಮೀಜ್ ರಾಜಾ ನಿಮ್ಮ ಹತಾಶೆ ಹೆಚ್ಚುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ವೀಡಿಯೊ ವೈರಲ್ ಆದ ನಂತರ, ಅನೇಕ ಪಾಕಿಸ್ತಾನಿ ಯೂಸರ್‌ಗಳೂ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಅವರನ್ನು ಟೀಕಿಸಿದ್ದಾರೆ. ಒಬ್ಬ ಯೂಸರ್ ಕಮೆಂಟ್ ಮಾಡುತ್ತ, “ಅಧ್ಯಕ್ಷರು ಮಾಡಿದ ನಡವಳಿಕೆಯು ಸರಿಯಿರಲಿಲ್ಲ” ಎಂದು ಬರೆದಿದ್ದಾರೆ.

ಅದೇ ಸಮಯದಲ್ಲಿ, ಸಾದ್ ಎಂಬ ಯೂಸರ್, “ರೋಹಿತ್ ಭಾಯ್ ನಾನು ಪಾಕಿಸ್ತಾನಿ. ನಿಮ್ಮ ಪ್ರಶ್ನೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ರಮೀಜ್ ರಾಜಾ ಅವರ ನಡವಳಿಕೆ ಸ್ವೀಕಾರಾರ್ಹವಲ್ಲ” ಎಂದು ಬರೆದಿದ್ದಾರೆ.

ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 170 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಾದ ಬಳಿಕ 171 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಪಾಕಿಸ್ತಾನವನ್ನ ಸೋಲಿಸುವ ಮೂಲಕ ಶ್ರೀಲಂಕಾ ಏಷ್ಯಾ ಕಪ್‌ನ್ನ ಮುಡಿಗೇರಿಸಿಕೊಂಡಿದೆ.

Advertisement
Share this on...