“ಸರ್ ನನ್ನ ಈ ಕುರಿಯನ್ನ ಮಾರೋಕೂ ಆಗಲ್ಲ, ಕಡಿಯೋಕೂ ಆಗಲ್ಲ, ಈಗ ಇದನ್ನ….”: ತನ್ನ‌ ಕುರಿಯನ್ನ ನೇರವಾಗಿ SP ಆಫೀಸ್‌ಗೆ ಎಳೆದೊಯ್ದ ವ್ಯಕ್ತಿ, ಕಾರಣ ತಿಳಿದರೆ ಶಾಕ್ ಆಗ್ತೀರ

in Uncategorized 53,718 views

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಲ್ಲಿ ಒಬ್ಬ ವ್ಯಕ್ತಿ ಕೈಯಲ್ಲಿ ತನ್ನ ಕುರಿಯೊಂದಿಗೆ 20 ಕಿಲೋಮೀಟರ್ ದೂರ ನಡೆದುಕೊಂಡು ಎಸ್‌ಪಿ ಕಚೇರಿಗೆ ಬಂದಿದ್ದಾನೆ.

Advertisement

Bareilly: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಲ್ಲಿ ಒಬ್ಬ ವ್ಯಕ್ತಿ ಕೈಯಲ್ಲಿ ತನ್ನ ಕುರಿಯೊಂದಿಗೆ 20 ಕಿಲೋಮೀಟರ್ ದೂರ ನಡೆದುಕೊಂಡು ಎಸ್‌ಪಿ ಕಚೇರಿಗೆ ಬಂದಿದ್ದಾನೆ. ಆತ ಪೋಲಿಸರಿಗೆ, “ಕೆಲ ವ್ಯಕ್ತಿಗಳು ಮೋಸದಿಂದ ಮನ್ನತ್‌ಗೆ ಏರಿಸಿದ್ದ ಅಂದರೆ ಅಲ್ಲಾಹ್‌ಗೆ ಅರ್ಪಿಸಿದ್ದ ಕುರಿಯನ್ನ ಮಾರಾಟ ಮಾಡಿದ್ದಾರೆ. ಈಗ ಧಾರ್ಮಿಕ ರೀತಿ ರಿವಾಜುಗಳ ಪ್ರಕಾರ ನಾನು ಇದನ್ನ ಕಡಿಯೋಕೂ ಆಗಲ್ಲ ಮಾರೋಕೂ ಆಗಲ್ಲ” ಎಂದಿದ್ದಾನೆ. ವ್ಯಕ್ತಿಯ ಈ ವಿಚಿತ್ರ ಮಾತುಗಳನ್ನ ಕೇಳಿ ಪೋಲಿಸರೂ ಒಂದು ಕ್ಷಣ ದಂಗಾಗಿದ್ದಾರೆ.

ಈ ಘಟನೆಯು ಭೋಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಹಪುರ್ ಇನಾಯತುಲ್ಲಾಗೆ ಸಂಬಂಧಿಸಿದೆ. ಅಲ್ಲಿನ ನಿವಾಸಿ ಬಾಬುರಾಮ್ ಎಂಬುವರು ಎಸ್‌ಎಸ್‌ಪಿ ಕಚೇರಿಗೆ ದೂರು ಸಲ್ಲಿಸಿದರು. ಗ್ರಾಮದ ಮೂವರು ಜನರು ಆಣತಿಯಂತೆ ನೀಡಿದ್ದ ಮೇಕೆಯನ್ನು ತನಗೆ ಮಾರಾಟ ಮಾಡಿ ವಂಚಿಸಿದ್ದಾರೆ ಎಂದು ಬಾಬುರಾಮ್ ಪೊಲೀಸರಿಗೆ ತಿಳಿಸಿದ್ದಾರೆ. ಅವರು ಅದನ್ನು ಕಡಿಯಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ. ಈ ಕುರಿಯನ್ನ ಅಕ್ಕಪಕ್ಕದ ಗ್ರಾಮದ ಕುಟುಂಬವೊಂದು ಆಣತಿಯಂತೆ ಕಾಡಿಗೆ ಬಿಟ್ಟಿದ್ದು, ಈ ಮೇಕೆಯನ್ನು ಈ ಜನರು ವಂಚನೆಯಿಂದ ಕಾಡಿನಿಂದ ಎತ್ತಿಕೊಂಡು ಬಂದು 5 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಸಂತ್ರಸ್ತ ಬಾಬುರಾಮ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಆ ಕುರಿ ಮನ್ನತ್‌ ನದ್ದಾಗಿದ್ದು ಎಂದು ತಿಳಿದು ಆರೋಪಿಗಳಿಗೆ ಹಣ ವಾಪಸ್‌ ಕೊಡುವಂತೆ ಕೇಳಿದರೂ ಹಣ ನೀಡಲು ನಿರಾಕರಿಸಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ತಿಳಿಸಿದ್ದಾರೆ. ಇದಾದ ಬಳಿಕ ಕುರಿಯ ಸಮೇತ ಎಸ್‌ಎಸ್‌ಪಿ ಕಚೇರಿ ತಲುಪಿದ್ದಾರೆ. ಅಲ್ಲಿ ಸಂತ್ರಸ್ತ ವ್ಯಕ್ತಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಇದೇ ವೇಳೆ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಠಾಣಾಧಿಕಾರಿಗೆ ಸಿಒ ಸೂಚನೆ ನೀಡಿದರು. ಇದರೊಂದಿಗೆ ಸಂತ್ರಸ್ತನಿಗೆ ಆದಷ್ಟು ಬೇಗ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:

“ನನಗೆ ಪ್ರಾಣಿಗಳೆಂದರೆ ಬಲು ಪ್ರೀತಿ” ಅಂತ ಹೇಳಿ ತನ್ನ ಹೆಂಡತಿಗೆ ಕತ್ತೆಯನ್ನ ಗಿಫ್ಟ್ ಮಾಡಿದ #ಅಜಲಾನ್_ಶಾಹ್: ಬಳಿ‌ಕ ಮೊದಲ ರಾತ್ರಿಯೇ ಅದನ್ನ…..

ಮದುವೆಯ ಸಂದರ್ಭದಲ್ಲಿ, ವಧು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಂದ ಅನೇಕ ಉಡುಗೊರೆಗಳನ್ನು ಪಡೆಯುತ್ತಾರೆ. ಅವುಗಳಲ್ಲಿ ಅತ್ಯಂತ ವಿಶೇಷವೆಂದರೆ ವರನು ತನ್ನ ವಧುವಿಗೆ ನೀಡುವ ಉಡುಗೊರೆಯಾಗಿರುತ್ತದೆ. ಮದುವೆಯಲ್ಲಿ ವಧು ಕತ್ತೆಯನ್ನು ಉಡುಗೊರೆಯಾಗಿ ಪಡೆಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದು ತಮಾಷೆಯಲ್ಲ, ಆದರೆ ಇದು ನೆರೆಯ ಪಾಕಿಸ್ತಾನದಲ್ಲಿ ನಡೆದಿದೆ. ವರನ ಈ ವಿಚಿತ್ರ ಉಡುಗೊರೆ ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು.

ಪಾಕಿಸ್ತಾನದ ಯೂಟ್ಯೂಬರ್ ಅಜಲಾನ್ ಷಾ ತಮ್ಮ ವಧು ವರಿಶಾಗೆ ಕತ್ತೆಯ ಮರಿಯನ್ನ ವಿಶಿಷ್ಟ ಉಡುಗೊರೆಯಾಗಿ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಉಡುಗೊರೆಯ ಚಿತ್ರವನ್ನು ಹಂಚಿಕೊಂಡ ಅವರು ಪೋಸ್ಟ್‌ನಲ್ಲಿ, “ವರಿಶಾ ಕತ್ತೆ ಮರಿಗಳನ್ನು ಪ್ರೀತಿಸುತ್ತಾಳೆ ಎಂದು ನನಗೆ ಮೊದಲೇ ತಿಳಿದಿತ್ತು, ಆದ್ದರಿಂದ ಇದು ನನ್ನ ಮದುವೆಯ ಉಡುಗೊರೆಯಾಗಿದೆ. ಕತ್ತೆಯ ಮರಿಯನ್ನ ತಾಯಿಯಿಂದ ಬೇರೆ ಮಾಡಿಲ್ಲ, ಅದಕ್ಕಾಗಿಯೇ ಅದನ್ನೂ ಕರೆದುಕೊಂಡು ಬಂದಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ವಾಸ್ತವವಾಗಿ, ಪಾಕಿಸ್ತಾನಿ ಯೂಟ್ಯೂಬರ್ ಅಜ್ಲಾನ್ ಶಾ ಮತ್ತು ವರಿಶಾ ಜಾವೇದ್ ಖಾನ್ ಈ ಹಿಂದೆ ಮದುವೆಯಾಗಿದ್ದರು. ನಿಕಾಹ್ ನಂತರ ದಾವತ್-ಎ-ವಲೀಮಾ (ಮದುವೆ ಔತಣ) ನಡೆಯಿತು. ಈ ಆರತಕ್ಷತೆ ಕೂಟದಲ್ಲಿ ಅಜ್ಲಾನ್ ತನ್ನ ಪತ್ನಿಗೆ ಕತ್ತೆ ಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಚಿತ್ರಗಳಷ್ಟೇ ಅಲ್ಲದೆ, ಅಜ್ಲಾನ್ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅಜ್ಲಾನ್ ತನ್ನ ಉಡುಗೊರೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಅಜ್ಲಾನ್ ಮಾತನಾಡುತ್ತ, “ಉಡುಗೊರೆಯಲ್ಲಿ ಕತ್ತೆ ಏಕೆ? ಎಂಬುದು ಪ್ರಶ್ನೆ. ಉತ್ತರವೆಂದರೆ ನೀವು ಅದನ್ನು ಇಷ್ಟಪಡುತ್ತೀರಿ (ಕತ್ತೆ) ಮತ್ತು ಎರಡನೆಯದಾಗಿ ಇದು ವಿಶ್ವದ ಅತ್ಯಂತ ಶ್ರಮಶೀಲ ಮತ್ತು ಪ್ರೀತಿಯ ಪ್ರಾಣಿ” ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ವಧುವೂ ಹಿಂದೆ ಉಳಿದಿಲ್ಲ. ವರಿಶಾ ಮಾತನಾಡುತ್ತ, “ನಾನು ನಿನಗೆ ಕತ್ತೆಯಾಗಲು ಬಿಡುವುದಿಲ್ಲ” ಎಂದು ಹೇಳುತ್ತಿದ್ದಳು. ಈ ಉಡುಗೊರೆಯ ಬಗ್ಗೆ ಅಜ್ಲಾನ್ ಮತ್ತಷ್ಟು ಮಾತನಾಡುತ್ತ, “ನಾನು ಪ್ರಾಣಿಗಳನ್ನು ಪ್ರೀತಿಸುತ್ತೇನೆ, ಜನರು ಏನೇ ಹೇಳಲಿ, ಕತ್ತೆ ನನ್ನ ಸ್ಪ್ರಿಟ್ ಅನಿಮಲ್ (ಆತ್ಮ ಪ್ರಾಣಿ), ನಾನು ಕತ್ತೆಯನ್ನು ಪ್ರೀತಿಸುತ್ತೇನೆ, ಇದು ವರಿಶಾಗೆ ನನ್ನ ಉಡುಗೊರೆ.” ಎಂದು ಹೇಳುತ್ತಾರೆ.

ಇದರ ನಂತರ ಅಜ್ಲಾನ್ ನಗುತ್ತಾ, “ದಯವಿಟ್ಟು ಇದನ್ನು ನೋಡಿ ಗೇಲಿ ಮಾಡಬೇಡಿ” ಎನ್ನುತ್ತಾರೆ. ಈ ಸಂದರ್ಭದಲ್ಲಿ ಅಜ್ಲಾನ್ ಷಾ ಅವರು ಕತ್ತೆ ಮರಿಯನ್ನ ಅದೆ ತಾಯಿಯಿಂದ ಬೇರ್ಪಡಿಸಿಲ್ಲ ಎಂದು ಜನರಿಗೆ ತಿಳಿಸಿದ್ದು, ಆ ಕತ್ತೆಯನ್ನೂ ಕರೆತಂದಿದ್ದೇವೆ ಎಂದು ಹೇಳುತ್ತಾರೆ.

ಅಜ್ಲಾನ್ ಮತ್ತು ವರಿಶಾ ಅವರ ವಿವಾಹದಲ್ಲಿ ಅನೇಕ ಯೂಟ್ಯೂಬರ್‌ಗಳು, ಟಿಕ್‌ಟಾಕರ್‌ಗಳು ಮತ್ತು ಪಾಕಿಸ್ತಾನಿ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು ಎಂದು ಪಾಕಿಸ್ತಾನಿ ಮಾಧ್ಯಮ ವರದಿಗಳು ಹೇಳಿಕೊಂಡಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರೊಂದಿಗೆ ಈ ಬಗ್ಗೆ ಚರ್ಚೆಯೂ ಆರಂಭವಾಗಿದೆ. ಕೆಲವರು ಅಜ್ಲಾನ್ ನೀಡಿರುವ ಉಡುಗೊರೆಯನ್ನು ಶ್ಲಾಘಿಸುತ್ತಿದ್ದರೆ ಕೆಲವರು ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಯೂಟ್ಯೂಬರ್‌ಗಳ ವಿವಾಹಗಳನ್ನು ವೈದ್ಯರು ಮತ್ತು ಎಂಜಿನಿಯರ್‌ಗಳಿಗಿಂತ ಹೆಚ್ಚು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಕಾರಣ ಅಲ್ಲಿ ಯೂಟ್ಯೂಬರ್‌ಗಳು ವೈದ್ಯರು ಮತ್ತು ಇಂಜಿನಿಯರ್‌ಗಳಿಗಿಂತ ಹೆಚ್ಚು ಸಂಪಾದಿಸುತ್ತಾರೆ. ಪಾಕಿಸ್ತಾನದ ದುಬಾರಿ ವಿವಾಹಗಳಲ್ಲಿ ಅಜ್ಲಾನ್ ಮತ್ತು ವರಿಶಾ ಅವರ ವಿವಾಹವೂ ಒಂದು ಎಂದು ಹೇಳಲಾಗುತ್ತಿದೆ.

Advertisement
Share this on...