ನಿರ್ಲಜ್ಜ ರಾಜಕಾರಣಿಗಳ, ಸರ್ಕಾರದ ಅಸಡ್ಡೆತನದಿಂದ ಬೇಸತ್ತು ಹೆಂಡತಿಯ ಮಂಗಳಸೂತ್ರ ಹಾಗು ಒಡವೆಗಳನ್ನ ಅಡವಿಟ್ಟು ಗ್ರಾಮಕ್ಕೆ ಸೇತುವೆ ನಿರ್ಮಿಸಿದ ಟ್ರಕ್ ಚಾಲಕ್ ರಂಜಿತ್: ಈಗ ಹೆಂಡತಿಯೇ….

in Uncategorized 3,814 views

ಮಳೆಯಲ್ಲಿ ಕಪ್ಪೆಗಳು ಹೇಗೆ ಹೊರಬರುತ್ತವೆಯೋ, ಹಾಗೆಯೇ ಚುನಾವಣೆ ಬಂದಾಗಲೇ ರಾಜಕೀಯ ನಾಯಕರೂ ಹೊರಬರುತ್ತಾರೆ. ಅದಾದ ಬಳಿಕ ಮತ್ತೆ ತಮ್ಮ ಬಿಲಗಳನ್ನು ಸೇರಿಕೊಂಡು ಬಿಡುತ್ತಾರೆ. ಕಪ್ಪೆ ಮತ್ತೆ ತಮ್ಮ ಮನೆ ಸೇರಿದ್ದಕ್ಕೆ ಯಾರೂ ದೂರುವುದಿಲ್ಲ ಏಕೆಂದರೆ ಅವುಗಳು ಜನರಿಗೆ ನಮಗೆ ಯಾವುದೇ ಭರವಸೆ ನೀಡಿರುವುದಿಲ್ಲ. ಆದರೆ ರಾಜಕೀಯ ನಾಯಕರ ಈಡೇರದ ಭರವಸೆಗಳನ್ನು ನೆನೆಸಿಕೊಂಡರೆ ಮೈ ಉರಿದುಹೋಗುತ್ತದೆ. ಒಡಿಶಾದ ಟ್ರಕ್ ಚಾಲಕ ರಂಜಿನ್ ನಾಯಕ್ ಅವರಿಗೆ ಹಾಗು ಅವರ ಗ್ರಾಮಸ್ಥರ ಜೊತೆಗೂ ಇದೇ ರೀತಿಯ ಘಟನೆ ಸಂಭವಿಸಿದೆ. ಕಳೆದೆರಡು ಚುನಾವಣೆಗಳಿಂದ ತಮ್ಮ ಗ್ರಾಮದಲ್ಲಿ ನದಿಗೆ ಸೇತುವೆ ನಿರ್ಮಿಸಲಾಗುವುದು ಎಂಬ ರಾಜಕಾರಣಿಗಳ ಮಾತು ಕೇಳಿ ಕೇಳಿ ಸುಸ್ತಾಗಿದ್ದರು. ಆದರೆ ರಾಜಕೀಯ ನಾಯಕರು ತಮ್ಮ ಮಾತುಗಳನ್ನ ಈಡೇರಿಸದಿದ್ದಾಗ ರಂಜಿತ್ ತಮ್ಮ ಪತ್ನಿಯ ಒಡವೆಗಳನ್ನು ಅಡವಿಟ್ಟು ಸೇತುವೆ ನಿರ್ಮಿಸಿದ್ದಾರೆ. (Odisha Driver Pawns wife Jewellery To Build Bridge)

Advertisement

ಸೇತುವೆಯಿಲ್ಲದೆ ನದಿ ದಾಟಲು ಹೋಗಿ ಗಾಯಗೊಂಡಿದ್ದ ಗ್ರಾಮಸ್ಥರು

ಓರಿಸ್ಸಾದ ರಾಯಗಡ ಜಿಲ್ಲೆಯ ಕಾಶಿಪುರ ಬ್ಲಾಕ್‌ನ ಗುಂಜರಂಪಂಜಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಿಯ ಪ್ರಕಾರ, 26 ವರ್ಷದ ರಂಜಿತ್ ಅವರ ಗ್ರಾಮದಲ್ಲಿ 100 ಕುಟುಂಬಗಳು ವಾಸಿಸುತ್ತಿವೆ. ಬಿಚ್ಚಾ ನದಿಗೆ ಸೇತುವೆ ನಿರ್ಮಿಸಲಾಗುವುದು. ಇದರಿಂದ ಗ್ರಾಮಸ್ಥರು ಸಮೀಪದ ಕಾಳಹಂಡಿ ಜಿಲ್ಲೆಯಲ್ಲಿ ನಿರ್ಮಿಸಿರುವ ಜಿಲ್ಲಾಸ್ಪತ್ರೆಗೆ ಸುಲಭವಾಗಿ ತಲುಪಬಹುದಾಗಿದೆ ಎಂದು ರಾಜಕೀಯ ಮುಖಂಡರು ಚುನಾವಣಾ ಭರವಸೆಗಳನ್ನು ನೀಡುತ್ತಲೇ ಬಂದಿದ್ದರು. ಆದರೆ ಅವರ ಭರವಸೆಗಳು ಭರವಸೆಗಳಾಗೇ ಉಳಿದುಬಿಟ್ಟವು.

ನದಿ ದಾಟಲು ಯತ್ನಿಸಿದ ಹಲವರು ಗಾಯಗೊಂಡಿದ್ದಾರೆ. ನದಿ ಆಳವಾಗಿರಲಿಲ್ಲ ಆದರೆ ಹರಿವು ವೇಗವಾಗಿತ್ತು. ಸೇತುವೆ ದಾಟಲು ಯತ್ನಿಸುತ್ತಿದ್ದಾಗ ಕೆಲವು ದ್ವಿಚಕ್ರ ವಾಹನಗಳೂ ನೀರಿನಲ್ಲಿ ಕೊಚ್ಚಿ ಹೋಗಿವೆ. ಸೇತುವೆ ನಿರ್ಮಾಣವಾದರೆ ಗ್ರಾಮಸ್ಥರು ಕಾಳಹಂಡಿ ಮತ್ತು ನಬರಂಗಪುರ ಜಿಲ್ಲೆಗಳಿಗೆ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ರಂಜಿತ್ ನಾಯಕ ಮತ್ತು ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಅವರ ಮಾತನ್ನ ಯಾರೂ ಕೇಳಲಿಲ್ಲ.

ಸೇತುವೆ ನಿರ್ಮಾಣ ಮಾಡಲು ಹೆಂಡತಿಯ ಒಡವೆಗಳನ್ನೇ ಅಡವಿಟ್ಟ ರಂಜಿತ್

ಅಂತಹ ಪರಿಸ್ಥಿತಿಯಲ್ಲಿ, ಜೂನ್ 2022 ರಲ್ಲಿ, ರಂಜಿತ್ ಆಡಳಿತ ಮತ್ತು ಸರ್ಕಾರಿ ಅಧಿಕಾರಿಗಳಿಂದ ಸೇತುವೆ ನಿರ್ಮಾಣದ ಆಸೆಯನ್ನು ನಿರೀಕ್ಷಿಸುವುದನ್ನೇ ನಿಲ್ಲಿಸಿದರು. ಖುದ್ದು ತಾವೇ ಗ್ರಾಮದ ಈ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದರು. ಆದರೆ, ಕಾಂಕ್ರೀಟ್ ಸೇತುವೆ ನಿರ್ಮಿಸಲು ಅವರ ಬಳಿ ಅಷ್ಟು ಹಣ ಇರಲಿಲ್ಲ. ಆಗ ಅವರು ಮರದ ಸೇತುವೆಯನ್ನು ನಿರ್ಮಾಣ ಮಾಡಲು ಯೋಚಿಸಿದರು.

ಆದರೆ ಅದಕ್ಕೂ ರಂಜಿತ್ ಬಳಿ ಹಣ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪತ್ನಿಯ ಒಡವೆಗಳನ್ನು ಅಡವಿಟ್ಟು 70 ಸಾವಿರ ರೂ. ವ್ಯವಸ್ಥೆ ಮಾಡಿದರು. ಅದರ ನಂತರ, ಸೇತುವೆ ಮಾಡಲು ಬಿದಿರು ಮತ್ತು ಮರದಂತಹ ವಸ್ತುಗಳನ್ನು ಖರೀದಿಸಿ ತಂದರು. ಸೇತುವೆ ನಿರ್ಮಾಣಕ್ಕೆ ರಂಜಿತ್ ತಂದೆ ಕೈಲಾಶ್ ಕೂಡ ಬೆಂಬಲ ನೀಡಿದ್ದಾರೆ. ಇಬ್ಬರೂ ಸೇರಿ ಸೇತುವೆ ಕಟ್ಟಲು ಆರಂಭಿಸಿದರು.

Odisha Driver Pawns wife Jewellery To Build Bridge

ರಂಜಿತ್ ತಮ್ಮ ಗ್ರಾಮಕ್ಕೆ ಸೇತುವೆ ಕಟ್ಟಲು ಕೆಲ ದಿನಗಳ ಕಾಲ ತಮ್ಮ ಟ್ರಕ್ ಓಡಿಸುವ ಕೆಲಸವನ್ನೂ ಬಿಟ್ಟಿದ್ದರು. ಅಂತಿಮವಾಗಿ, ನವೆಂಬರ್ 2022 ರಲ್ಲಿ, ತಂದೆ ಮತ್ತು ಮಗ ಒಟ್ಟಿಗೆ ಸೇರಿ ಸೇತುವೆಯನ್ನು ಸಿದ್ಧಪಡಿಸಿದರು. ಸೇತುವೆಯು ಮರದಿಂದ ಮಾಡಲ್ಪಟ್ಟಿರಬಹುದು, ಆದರೆ ದ್ವಿಚಕ್ರ ವಾಹನಗಳು ಸುಲಭವಾಗಿ ಚಲಿಸುವಷ್ಟು ಬಲವಾಗಿದೆ.

ರಂಜಿತ್ ಹಾಗು ಅವರ ತಂದೆಯ ಈ ಪ್ರಯತ್ನಕ್ಕೆ ಗ್ರಾಮಸ್ಥರು ಅವರಿಗೆ ಚಿರ‌ಋಣಿಯಾಗಿದ್ದು ಸರ್ಕಾರಕ್ಕೆ ಹಾಗು ಸ್ಥಳೀಯ ರಾಜಕೀಯ ನಾಯಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಸೇತುವೆಯಿಂದ ಇದೀಗ ಗ್ರಾಮಸ್ಥರು ಪಕ್ಕದ ಊರಿಗೆ, ಆಸ್ಪತ್ರೆಗೆ ಹೋಗಲು ನೆರವಾಗಿದ್ದು ರಂಜಿತ್ ರವರ ಈ ಸಾಧನೆಗೆ ಕೊಂಡಾಡುತ್ತಿದ್ದಾರೆ.

Advertisement
Share this on...