ಅಷ್ಟಕ್ಕೂ ಯಾಕೆ ಸಾಕ್ಷಾತ್ ಶಿವನೇ ನ್ಯಾಯಾಲಯಕ್ಕೆ ಹಾಜರಾಗುವ ಪರಿಸ್ಥಿತಿ ಒದಗಿಬಂದಿತ್ತು? ಅಷ್ಟಕ್ಕೂ ಅಲ್ಲಿ ಅಂತಹ ಘಟನೆ ನಡೆದದ್ದಾದರೂ ಯಾಕೆ? ನ್ಯಾಯಾಲಯದಲ್ಲಿ ನ್ಯಾಯಾಧೀಶರ ಜೊತೆ ನಡೆದದ್ದನ್ನ ಕಂಡು ಅಲ್ಲಿದ್ದ ಜನ ದಂಗಾಗಿದ್ದಾದರೂ ಯಾಕೆ? ಆ ಘಟನೆಯ ಬಳಿಕ ನ್ಯಾಯಾಧೀಶರ ಜೀವನವೇ ಬದಲಾಗಿದ್ದು ಹೋಗಿದ್ದಾದರೂ ಯಾಕೆ? ಬನ್ನಿ ಸ್ನೇಹಿತರೇ ನಾವಿಂದು ನಿಮಗೆ ಈ ರೋಚಕ ಕಥಾನಕದ ಬಗ್ಗೆ ತಿಳಿಸಲಿದ್ದೇವೆ.
ನಾವಿಂದು ನಿಮಗೆ ತಿಳಿಸಲು ಹೊರಟಿರುವುದು ಯಾವುದಾದರೂ ಮಂದಿರದ ಬಗ್ಗೆಯಲ್ಲ ಬದಲಾಗಿ ನಾವಿಂದು ನಿಮಗೆ ಭಗವಾನ್ ಶಿವ ಹಾಗು ಶಿವನ ಭಕ್ತನಿಗೆ ಸಂಬಂಧಿಸಿದ ನೈಜ ಘಟನೆಯೊಂದರ ಬಗ್ಗೆ ತಿಳಿಸಲಿದ್ದೇವೆ. ಗೆಳೆಯರೇ ನಾವೆಲ್ಲಾ ಕಕ್ಷಿದಾರರು, ದೂರುದಾರರು ನ್ಯಾಯಾಲಯಕ್ಕೆ ಹೋಗುವುದನ್ನ ಕೇಳಿರುತ್ತೇವೆ ಆದರೆ ಭಗವಾನ್ ಶಿವನೇ ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳಿದ್ದ ಬಗ್ಗೆ ಕೇಳಿರುತ್ತೀರ? ಇಲ್ಲ ತಾನೆ? ಹೌದು ಇದು ಚಮತ್ಕಾರಕ್ಕಿಂತವೇನೂ ಕಮ್ಮಿಯಿಲ್ಲ.
ಹೌದು ಈ ಘಟನೆ ಬರೋಬ್ಬರಿ 41 ವರ್ಷಗಳ ಹಿಂದೆ ಅಂದರೆ 1980 ರಲ್ಲಿ ಘಟಿಸಿತ್ತು. ಈ ಘಟನೆ ವೃಂದಾವನದ್ದಾಗಿದ್ದು ಅಲ್ಲಿ ಒಬ್ಬ ಸಂತರೊಬ್ಬರು ವಾಸಿಸುತ್ತಿದ್ದರು. ಅವರು ಅಪ್ಪಟ ಶಿವಭಕ್ತರಾಗಿದ್ದರು. ಪ್ರತಿನಿತ್ಯ ಶಿವನ ಪೂಜೆ ಪುನಸ್ಕಾರ ಮಾಡುತ್ತಿದ್ದರು ಆದರೆ ಮಂದಿರದೊಳಗೆ ಅವರು ಎಂದಿಗೂ ಹೋಗುತ್ತಿರಲಿಲ್ಲ. ಸ್ಥಳೀಯ ಜನ ಅವರನ್ನ ಜಡ್ಜ್ ಸಾಹೇಬ್ ಜಡ್ಜ್ ಸಾಹೇಬ್ ಅಂತ ಕರೆಯುತ್ತಿದ್ದರು.
ಆಗ ಅಲ್ಲಿನ ಭಕ್ತನೊಬ್ಬ ಪುರೋಹಿತರ ಜೊತೆ ಮಾತನಾಡುತ್ತ ಇಲ್ಲಿನ ಜನ ಆ ಸಂತನನ್ನ ಜಡ್ಜ್ ಸಾಹೇಬ್ ಅಂತ ಯಾಕೆ ಕರೀತಾರೆ ಅಂತ ಕೇಳ್ತಾನೆ. ಆಗ ಪುರೋಹಿತರು ಸಂತನ ಬಗೆಗಿನ ನೈಜ ಸಂಗತಿಯನ್ನ ಹಾಗು ಆ ವ್ಯಕ್ತಿಯ ಜೊತೆ ನಡೆದಿದ್ದ ಸತ್ಯ ಘಟನೆಯನ್ನ ತಿಳಿಸಿದರು.
ದಕ್ಷಿಣ ಭಾರತದ ಖ್ಯಾತ ನಗರವೊಂದರಲ್ಲಿ ಆ ಸಂತ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದರು. ಒಂದು ದಿನ ಜಡ್ಜ್ ಬಳಿ ಒಂದು ಕೇಸ್ ಬಂತು, ಆ ಕೇ-ಸ್‌ನ ವಿಚಾರಣೆ ನಡೆಸಿ ತೀರ್ಪು ಕೊಟ್ಟ ಬಳಿಕ ಆ ಜಡ್ಜ್‌ನ ಜೀವನವೇ ಬದಲಾಗಿಬಿಟ್ಟಿತ್ತು. ಹಾಗಿದ್ದರೆ ಆ ಕೇ-ಸ್ ಆದರೂ ಏನಿತ್ತು? ಅದರಿಂದಾಗಿ ಜಡ್ಜ್ ಜೀವನ ಬದಲಾಗಿದ್ದಾದರೂ ಹೇಗೆ? ತಿಳೊಯೋಣ ಬನ್ನಿ.
ಜಡ್ಜ್ ಯಾವ ನಗರದಲ್ಲಿ ವಾಸಿಸುತ್ತಿದ್ದರೋ ಅದೇ ನಗರದ ಬಳಿ ಒಂದು ಹಳ್ಳಿಯಲ್ಲಿ ಭೋಲಾ ಎಂಬ ವ್ಯಕ್ತಿ ವಾಸಿಸುತ್ತಿದ್ದ. ಈ ವ್ಯಕ್ತಿ ಹೆಸರಿಗೆ ತಕ್ಕಂತೆ ಭೋಲಾ, ವಿನಯವಂತ ಹಾಗು ಬಡವನಾಗಿದ್ದ. ಒಮ್ಮೆ ತನ್ನ ಮಗನ ಮದುವೆಗಾಗಿ ಭೋಲಾ ತನ್ನ ಹಳ್ಳಿಯ ಸಾಹುಕಾರನ ಬಳಿ ಸಾ-ಲ ಪಡೆದುಕೊಂಡ. ಬಳಿಕ ಕೆಲ ದಿನಗಳ ಬಳಿಕ ಭೋಲಾ ಬ-ಡ್ಡಿ ಸಮೇತ ಸಾಹುಕಾರನ ಬಳಿ ಪಡೆದಿದ್ದ ಹಣವನ್ನ ತೀರಿಸಲು ಸಾಹುಕಾರ ಬಳಿ ಹೋದ. ಭೋಲಾ ವಾಪಸ್ ಮಾಡಿದ ಹಣವನ್ನ ಪಡೆದ ಸಾಹುಕಾರ ಭೋಲಾ ಕೈಯಿಂದ ಹಸ್ತಾಕ್ಷರ ಮಾಡಿಸಿಕೊಂಡು “ಭೋಲಾ ತಾನು ಪಡೆದಿದ್ದ ಸಾಲವನ್ನ ತೀರಿಸಿದ್ದಾನೆ” ಎಂದು ಒಂದು ಕಾಗದದ ಮೇಲೆ ಬರೆಯುತ್ತಾನೆ.
ಆ ಕಾಗದವನ್ನ ಭೋಲಾಗೆ ತೋರಿಸಿ ಸರಿಯಾಗಿ ಓದು ನೀನು ಎಲ್ಲಾ ಸಾಲವನ್ನ ತೀರಿಸಿದ್ದೀಯ ಅಂತ ಬರೆದಿದ್ದೀನಿ ಎನ್ನುತ್ತಾನೆ. ಆದರೆ ಭೋಲಾ ಅನಕ್ಷರಸ್ಥನಾಗಿದ್ದ, ಆತನಿಗೆ ಓದಲು ಬರೆಯಲು ಬರದಿದ್ದ ಕಾರಣ ಭೋಲಾ, “ಸಾಹುಕಾರರೇ ನನಗಂತೂ ಓದೋಕೆ ಬರೆಯೋಕೆ ಬರೋಲ್ಲ, ಅದೇನಿದ್ದರೂ ನನ್ನ ಭೋಲೇನಾಥನೇ (ಶಿವನೇ) ನೋಡಿಕೊಳ್ಳುತ್ತಾನೆ ಬಿಡಿ” ಎನ್ನುತ್ತಾನೆ.
ಭೋಲಾನ ಈ ಮಾತುಗಳನ್ನ ಕೇಳಿ ಸಾಹುಕಾರನ ದು-ರಾ-ಸೆ ಹೆಚ್ಚಾಗಿಬಿಡುತ್ತದೆ. ಆಗ ಆತ ಈ ಭೋಲಾನಿಗಂತೂ ಓದೋಕೆ ಬರೆಯೋಕೆ ಬರಲ್ಲಿ, ಈಗಲೇ ನಾನು ಈ ಪತ್ರವನ್ನ ಬದಲಿಸಿಬಿಡುತ್ತೇನಂತ ಅದನ್ನ ಬದಲಿಸಿ ಕೆಲ ದಿನಗಳ ಬಳಿಕ ಭೋಲಾ ತನ್ನ ಸಾಲ ತೀರಿಸಿಲ್ಲ ಅಂತ ಆತನ ವಿ-ರು-ದ್ಧ “ಭೋಲಾ ನನ್ನ ಸಾಲ ತೀರಿಸಿಲ್ಲ” ಕೇ-ಸ್ ದಾಖಲಿಸಿಬಿಡುತ್ತಾನೆ.
ನ್ಯಾಯಾಲಯಕ್ಕೆ ಈ ಪ್ರ-ಕ-ರ-ಣ ತಲುಪಿದಾಗ ಭೋಲಾನಿಗೆ ನ್ಯಾಯಾಧೀಶರು ಏನಪ್ಪಾ ನೀನು ಸಾಹುಕಾರರ ಸಾ-ಲ ತೀರಿಸಿಲ್ಲಾಂತ ಕೇ-ಸ್ ಹಾಕಿದ್ದಾರೆ, ನೀನೇನಂತೀಯ? ಅಂತ ಕೇಳಿದಾಗ ಭೋಲಾ ತನಗೆ ಸಾಹುಕಾರ ನೀಡಿದ್ದ ಕಾಗದ ತೋರಿಸುತ್ತಾನೆ. ಆದರೆ ಸಾಹುಕಾರನು ಸಾಲ ತೀರಿಸಿರುವ ಬಗ್ಗೆಯಲ್ಲ ಬದಲಾಗಿ “ಭೋಲಾ ಸಾ-ಲ ತೀರಿಸಿಲ್ಲ” ಅನ್ನೋ ಪತ್ರವನ್ನ ಕೊಟ್ಟಿರುತ್ತಾನೆ.
ಆಗ ನ್ಯಾಯಾಧೀಶರು, “ಏನಪ್ಪಾ ನಿನ್ನ ಬಳಿ ಇನ್ನೇನಾದರೂ ಸಾಕ್ಷಿಗಳಿವೆಯಾ?” ಅಂತ ಕೇಳಿದಾಗ “ಇಲ್ಲ ಬುದ್ದಿ ನಾನು ಇವರಿಗೆ ಸಾ-ಲ ತೀರಿಸುವಾಗ ಅಲ್ಲಿ ನನ್ನ ಭೋಲೇನಾಥನನ್ನ ಬಿಟ್ಟು ಬೇರಾರೂ ಇರಲಿಲ್ಲ” ಎನ್ನುತ್ತಾನೆ. ಆಗ ನ್ಯಾಯಾಧೀಶರು ಭೋಲೇನಾಥನನ್ನ ವಿಚಾರಣೆಗೆ ಕರೆಸಲು ಮುಂದಿನ ತಾರೀಖನ್ನ ಕೊಟ್ಟರು.
ಆ ದಿನ ನ್ಯಾಯಾಲಯಕ್ಕೆ ವೃದ್ಧ ವ್ಯಕ್ತಿಯೊಬ್ಬ ತಾನೇ ಭೋಲೇನಾಥನೆಂದು ಹಾಜರಾದ. ಆ ವ್ಯಕ್ತಿ ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನ ಧರುಸಿದ್ದ. ಆ ವ್ಯಕ್ತಿ ಸಾಕ್ಷಿ ಹೇಳುತ್ತ, “ಭೋಲಾ ಅಮಾಯಕ ವ್ಯಕ್ತಿ, ಆತ ಸಾಹುಕಾರನ ಸಾ-ಲ-ವನ್ನೆಲ್ಲಾ ಬಡ್ಡಿ ಸಮೇತ ತೀರಿಸಿದ್ದಾನೆ” ಎಂದು ಹೇಳುತ್ತಾನೆ. ಆಗ ನ್ಯಾಯಾಧೀಶರು, “ನಿನ್ನ ಬಳಿ ಏನಾದರೂ ಸಾಕ್ಷಿ ಇದೆಯಾ?” ಎಂದು ಕೇಳಿದಾಗ, ಆ ವೃದ್ಧ ವ್ಯಕ್ತಿ, “ಸಾಹುಕಾರನ ಕೋಣೆಯಲ್ಲಿನ ಅಲಮಾರಿಯ ಮೂರನೆ ಶೆಲ್ಫ್ ನಲ್ಲಿ ಫೈಲ್ ನಂಬರ್ 12 ರಲ್ಲಿ ಭೋಲಾ ಸಾಲ ತೀರಿಸಿದ್ದಾನೆ ಎಂಬುದಕ್ಕೆ ಸಾಕ್ಷಿಗಳಿವೆ” ಎಂದು ಹೇಳುತ್ತಾನೆ. ಆಗ ತ-ನಿ-ಖೆ ನಡೆಸಿದಾಗ ಸತ್ಯಾಂಶ ಹೊರಬರುತ್ತೆ. ಸಾಕ್ಷಿ ಹೇಳಿದ ಆ ವ್ಯಕ್ತಿಯ ಹೆಸರೂ ಭೋಲೇನಾಥನೇ ಆಗಿತ್ತು. ನ್ಯಾಯಾಧೀಶರು ಈ ವ್ಯಕ್ತಿ ಯಾರು ಅಂತ ಭೋಲಾನಿಗೆ ಕೇಳಿದಾಗ ಭೋಲಾ ನಡೆದ ಘಟನೆಯನ್ನೆಲ್ಲಾ ಹೇಳುತ್ತಾನೆ.
ಆಗ ಇಡೀ ವೃತ್ತಾಂತ ಹಾಗು ಸತ್ಯಾಂಶ ತಿಳಿದ ನ್ಯಾಯಾಧೀಶರು ಸಾಕ್ಷಾತ್ ಶಿವನೇ ಬಂದು ಸಾಕ್ಷಿ ಹೇಳಿದನಾ? ಎಂದುಕೊಂಡರು. ಸಾಕ್ಷಾತ್ ಶಿವನೇ ವೃದ್ಧನ ರೂಪದಲ್ಲಿ ಬಂದು ನ್ಯಾಯಾಲಯದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದನು. ಆದರೆ ನಾನು ಶಿವನನ್ನೇ ಪ್ರಶ್ನಿಸಿಬಿಟ್ಟೆನಲ್ಲಾ ಎಂದು ಪಶ್ಚಾತಾಪ್ ದಿಂದ ನ್ಯಾಯಾಧೀಶರು ಶಿವನ ದರ್ಶನ ಪಡೆದ ನಾನೇ ಧನ್ಯನೆಂದು ಶಿವನ ಅಪ್ಪಟ ಭಕ್ತನಾಗಿ ಸನ್ಯಾಸಿ ಜೀವನ ನಡೆಸಲು ನಿರ್ಧರಿಸುತ್ತಾರೆ. ಆಗಿನಿಂದ ಅವರು ವೃಂದಾವನದಲ್ಲಿ ಸಂತನ ಜೀವನ ನಡೆಸಲಾರಂಭಿಸಿದರು. ಈ ಸತ್ಯ ತಿಳಿದಿದ್ದ ಸ್ಥಳೀಯ ಜನರೆಲ್ಲರೂ ಅವರನ್ನ ಅದಕ್ಕೇ ಜಡ್ಜ್ ಸಾಹೇಬ್ ಅಂತ ಕರೀತಾರೆ.
ಈ ನೈಜ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಗೆಳೆಯರೇ? ನಿಮ್ಮ ಅಭಿಪ್ರಾಯಗಳನ್ನ ತಪ್ಪದೇ ಕಮೆಂಟ್ ಮಾಡುವ ಮೂಲಕ ತಿಳಿಸಿ. ಧನ್ಯವಾದಗಳು, ಜೈ ಭೋಲೇನಾಥ್