ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾರತದ ಈ ವಸ್ತುಗಳು ಜಗತ್ತನ್ನೇ ನಿಬ್ಬೆರಗಾಗಿಸಿವೆ

in Kannada News/News/ಕನ್ನಡ ಮಾಹಿತಿ 3,299 views

ನಮಸ್ಕಾರ ಸ್ನೇಹಿತರೇ, ನಾವು ಇಂದು ನಿಮಗೆ ನಮ್ಮ ವೈದಿಕ ಹಾಗು ರಾಮಾಯಣ ಕಾಲದಲ್ಲಿ ವಿಮಾನಗಳ ಬಳಕೆಯ ಬಗ್ಗೆ ಉಲ್ಲೇಖವಿರುವ ವಿಷಯಗಳ ಬಗ್ಗೆ ತಿಳಿಸಲಿದ್ದೇವೆ. ಯಾರು ವಿಮಾನಗಳ ಉಪಯೋಗ ವೈದಿಕ ಕಾಲದಲ್ಲಿ ಇರಲಿಲ್ಲ ಅದೊಂದು ಕಟ್ಟುಕಥೆ ಅಂತ ಮೂಗು ಮುರಿಯುತ್ತಿದ್ದರೋ ಅವರೆಲ್ಲಾ ಈಗ ಕಾಂಟ್ರೋವರ್ಶಿಯಲ್ ಫೈಲ್ ಡಾಟ್ ನೆಟ್‌ನ ರಿಪೋರ್ಟ್‌ನ ಬಳಿಕ ಈಗ ನಂಬಲಾರಂಭಿಸಿದ್ದಾರೆ.

Advertisement

ಕಾಂಟ್ರೋವರ್ಶಿಯಲ್ ಫೈಲ್ ಡಾಟ್ ನೆಟ್‌ ನ ಪ್ರಕಾರ ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದ ಅಫ್ಘಾನಿಸ್ತಾನದ ದುರ್ಗಮ ಬೆಟ್ಟದ ಗುಹೆಯೊಳಗೆ ಸಾವಿರಾರು ವರ್ಷಗಳಷ್ಟು ಹಳೆಯದಾದ ಒಂದು ಫ್ಲೈಯಿಂಗ್ ಮಷೀನ್ ಸಿಕ್ಕಿತ್ತು. ‌ಮೊಟ್ಟ ಮೊದಲ ಬಾರಿಗೆ ಈ ವಿಚಿತ್ರವಾದ ವಸ್ತುವೊಂದನ್ನ ಅಮೇರಿಕಾದ ಸೈನಿಕರು ನೋಡಿದ್ದರು ಹಾಗು ಇದರ ಬಗ್ಗೆ ವಿಸ್ತೃತವಾದ ರಿಪೋರ್ಟ್ ತಯಾರು ಮಾಡಿ ಪೆಂಟಗನ್‌ಗೆ ಕಳುಹಿಸಿದ್ದರು.

ನಮ್ಮ ಪೂರ್ವಜರ ಅನ್ವೇಷಿಸಿದ್ದ ಹಾಗು ಅವರ ಜ್ಞಾನದಿಂದ ತಯಾರಿಸಿದ್ದ ಉಪಕರಣದಲ್ಲಿ ಪುಟ್ಟ ಬಲ್ಬ್ ನಂತಹ ವಸ್ತುವೊಂದನ್ನು ಬಳಸಲಾಗಿತ್ತು. ಈ ಚಿತ್ರವನ್ನ ನೋಡಿದ ಬಳಿಕ ನಮ್ಮ ಪೂರ್ವಜರು ಅದೆಷ್ಟು ಬುದ್ಧಿಶಾಲಿಗಳಾಗಿದ್ದರು ಅನ್ನೋದು ಅರ್ಥವಾಗುತ್ತದೆ. ನಿಮಗೇನನ್ಸತ್ತೆ? ನಿಜಕ್ಕೂ ನಮ್ಮ ಪೂರ್ವಜರ ಬಳಿ ಏಲಿಯನ್ಸ್ ಗಳ ಬಳಿಯಿರುವಷ್ಟು ಟೆಕ್ನಾಲಜಿ ಆಗಿನ ಕಾಲದಲ್ಲೇ ಇತ್ತಾ? ನಿಮ್ಮ ಅಭಿಪ್ರಾಯವನ್ನ ತಿಳಿಸಿ

ಮೇಲೆ ನೀವು ನೋಡುತ್ತಿರೋ ಚಿತ್ರದಲ್ಲಿ ಸಾವಿರಾರು ವರ್ಷಗಳಷ್ಟು ಪುರಾತನವಾಗಿದ್ದು ಇದು ಮಹಾಭಾರತ ಕಾಲದ್ದಾಗಿದೆ ಎಂದು ಪುರಾತತ್ತ್ವ ಅಧಿಕಾರಿಗಳು ಹೇಳಿದ್ದಾರೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಇದು ಒಂದು ಮಹಾಭಾರತ ಕಾಲದಲ್ಲಿ ಬಳಕೆಯಾಗಿದ್ದ ರಥವಾಗಿದ್ದು ಇದು ಉತ್ತರಪ್ರದೇಶ ರಾಜ್ಯದ ಬಾಗಪತ್ ಜಿಲ್ಲೆಯ ಸಿನೌಲಿ ಯಲ್ಲಿ ಪುರಾತತ್ವ ವಿಭಾಗದವರು ಉತ್ಖನನ ಮಾಡುತ್ತಿದ್ದ ಸಂದರ್ಭದಲ್ಲಿ ಸಿಕ್ಕಿತ್ತು. ರಥದ ಜೊತೆ ಜೊತೆಗೆ ತಾಮ್ರದ ಕನ್ನಡಿ ಹಾಗು ಕೆಲ ಮೂಳೆಗಳು, ಮಣ್ಣಿನ ಪಾತ್ರೆ, ಪುರಾತನ ತಲ್ವಾರ್, ತಾಮ್ರದ ಸಮೇತ ಕೆಲ ಅಸ್ಥಿಪಂಜರಗಳ ಅವಶೇಷಗಳೂ ದೊರೆತಿವೆ.

ಇವುಗಳನ್ನೆಲ್ಲ ನೋಡಿದರೆ ರಾಮಾಯಣ ಮಹಾಭಾರತ ಕಾಲ್ಪನಿಕ ಅಂತ ಹೇಳುತ್ತಿದ್ದವರು ಈಗ ಆ ಘಟನೆಗಳೆಲ್ಲಾ ನಿಜ ಎಂದು ಒಪ್ಪುತ್ತಿದ್ದಾರೆ. ಈ ವಸ್ತುಗಳ ಬಗ್ಗೆ ಹಾಗು ರಾಮಾಯಣ ಮಹಾಭಾರತದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ಕಮೆಂಟ್ ಮಾಡುವ ಮೂಲಕ ತಿಳಿಸಿ ಹಾಗು ಈ ಮಾಹಿತಿ ಇಷ್ಟವಾಗಿದ್ದರೆ ತಪ್ಪದೇ ಶೇರ್ ಮಾಡಿ

Advertisement
Share this on...