ಒಬ್ಬ ವ್ಯಕ್ತಿಯು ಭೂಮಿಯ ಮೇಲೆ ಹುಟ್ಟಿದಾಗಿನಿಂದ ಆ ಪರಮ ಶಕ್ತಿಯಲ್ಲಿ ಎಷ್ಟು ನಂಬಿಕೆಯನ್ನು ಹೊಂದಿರುತ್ತಾನೆ ಎಂದರೆ ಅವನು ತನ್ನ ಜೀವನದುದ್ದಕ್ಕೂ ದೇವರನ್ನು ಭೇಟಿಯಾಗುತ್ತೇನೆ ಎಂದು ಕಲ್ಪಿಸಿಕೊಳ್ಳುತ್ತಲೇ ಇರುತ್ತಾನೆ. ಇದಕ್ಕಾಗಿ, ಕೆಲವರು ಆಧ್ಯಾತ್ಮಿಕ ಚಟುವಟಿಕೆಗಳನ್ನು ಆಶ್ರಯಿಸುತ್ತಾರೆ, ಆದರೆ ಕೆಲವರು ದೇವರನ್ನು ಭೇಟಿಯಾಗಬೇಕೆಂಬ ಬಯಕೆಯಿಂದ ಢೋಂಗಿ ಬಾಬಾ, ಪಾದ್ರಿ ಅಥವಾ ನೀಮ್-ಹಕೀಮ್ ಗಳ ಬಲೆಗೆ ಬೀಳುತ್ತಾರೆ. ದಕ್ಷಿಣ ಆಫ್ರಿಕಾದ ಪಾದ್ರಿಯೊಬ್ಬ ಇದೇ ರೀತಿಯ ಕೆಲಸ ಮಾಡುತ್ತಿದ್ದಾರೆ, ಆತ ಜನರಿಂದ ಹಣ ಪಡೆದು ನೇರವಾಗಿ ದೇವರನ್ನು ದರ್ಶನ ಮಾಡಿಸುತ್ತೇನೆ ಎಂದು ಹೇಳುತ್ತಿದ್ದಾನೆ.
ದೇವರನ್ನು ಪಡೆಯುವ ಬಯಕೆಯಿಂದ ಜನರು ಲೌಕಿಕ ಬಾಂಧವ್ಯವನ್ನು ತೊರೆದಿರುವಂತಹ, ತಪಸ್ಸಿನಲ್ಲಿ ಮುಳುಗಿರುವಂತಹ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಯಾರೂ ಹಣವನ್ನು ಕೊಡಿ ದೇವರನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿಕೊಳ್ಳುವುದಿಲ್ಲ. ಸದ್ಯ, ದಕ್ಷಿಣ ಆಫ್ರಿಕಾದ ಪಾದ್ರಿಯೊಬ್ಬನ ವಿಚಿತ್ರ ಪ್ರಕರಣ ಮುನ್ನೆಲೆಗೆ ಬರುತ್ತಿದ್ದು, ಅದರಲ್ಲಿ ಆತ ಸುಮಾರು ಒಂದು ಲಕ್ಷ ರೂಪಾಯಿಗಳನ್ನು ನೀಡಿದರೆ ಬದಲಾಗಿ ‘ಸ್ವರ್ಗದಲ್ಲಿ ದೇವರನ್ನ ಭೇಟಿ ಮಾಡಿಸುತ್ತೇನೆ’ ಎಂದು ಜನರನ್ನು ಕೇಳುತ್ತಿದ್ದಾನೆ.
ಆಫ್ರಿಕಾದ ವಿವಾದಾತ್ಮಕ ಪಾದ್ರಿ ಎಂಎ ಬುದೇಲಿ (MS Budeli) ಪ್ರಕಾರ, ನೀವು ಹಣವನ್ನು ಖರ್ಚು ಮಾಡಲು ಸಿದ್ಧರಿದ್ದರೆ, ದೇವರನ್ನು ಭೇಟಿ ಮಾಡಿಸಲು ಆತ ನಿಮಗೆ ಸಹಾಯ ಮಾಡುತ್ತಾನೆ ಎಂದು ಹೇಳಿಕೊಂಡಿದ್ದಾನೆ. ಇದಕ್ಕಾಗಿ ಪ್ರಚಾರ ಪೋಸ್ಟರ್ ಕೂಡ ರೆಡಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೋಸ್ಟರ್ನಲ್ಲಿ – ‘ಬುದೇಲಿ ಬಳಿ ಆ ಶಕ್ತಿ ಇದೆ, ಅದರ ಮೂಲಕ ನೀವು ಸ್ಮಾರ್ಟ್ಫೋನ್ ನಿಂದ ನಿಮ್ಮ ಭವಿಷ್ಯವನ್ನು ನೋಡಬಹುದು, ಎಲ್ಲಾ ಸಾಲಗಳನ್ನು ತೀರಿಸಬಹುದು ಮತ್ತು ದೇವರನ್ನೂ ನೋಡಬಹುದು’ ಇದಕ್ಕಾಗಿ ನೀವು ಹಣ ಕೊಟ್ಟು ವರ್ಶಿಪ್ ಕಾನ್ಫರೆನ್ಸ್ ಗೆ ಹೋಗಬೇಕು. ಈ ಕಾನ್ಫರೆನ್ಸ್ ಡಿಸೆಂಬರ್ 25 ರಂದು ನಡೆಯಲಿದೆ, ಇದರಲ್ಲಿ ವಿಶೇಷ ಶಕ್ತಿಯನ್ನ ಜನ ಫೀಲ್ ಮಾಡಬಹುದು ಅಂತ ಪೋಸ್ಟರ್ ನಲ್ಲಿ ತಿಳಿಸಿದ್ದಾರೆ.
ಪ್ರತಿಯೊಂದಕ್ಕೂ ಬೇರೆ ಬೇರೆ ಚಾರ್ಜ್
ಸ್ವಾರಸ್ಯಕರ ಸಂಗತಿ ಎಂದರೆ ಸ್ವರ್ಗದಲ್ಲಿರುವ ದೇವರ ದರ್ಶನಕ್ಕೆ ಜನರು 96 ಸಾವಿರ ರೂಪಾಯಿಗಳ ಬೃಹತ್ ಮೊತ್ತವನ್ನು ನೀಡಬೇಕಿದೆ. ನೀವು ಸಾಲದಿಂದ ಮುಕ್ತರಾಗಬೇಕಿದ್ದರೆ ನೀವು 24,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ, ಮರುದಿನವೇ ಮದುವೆಯಾಗಲು, ನೀವು $580 ಅಂದರೆ 48,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಮತ್ತು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಭವಿಷ್ಯವನ್ನು ನೋಡಲು ನೀವು $ 1,160 ಅಂದರೆ 96,000 ರೂ. ಪಾವತಿಸಬೇಕಾಗುತ್ತದೆ. ಇನ್ನೂ ವಿಚಿತ್ರವೆಂದರೆ ಪಾದ್ರಿಯು ಪಾಪ್ಯುಲರ್ ಆನ್ಲೈನ್ ಗ್ಯಾಂಬ್ಲಿಂಗ್ ಏವಿಯೇಟರ್ ಗೇಮ್ ಅನ್ನು ಗೆಲ್ಲಲು ದೇವರ ದರ್ಶನಕ್ಕೆ ಆತ ತೆಗೆದುಕೊಳ್ಳುವ ಮೊತ್ತಕ್ಕಿಂತ 15 ಪಟ್ಟು ಹೆಚ್ಚು ಹಣವನ್ನು ಅಂದರೆ $17,400 (ಭಾರತೀಯ ಕರೆನ್ಸಿಯಲ್ಲಿ 14,47,000) ತೆಗೆದುಕೊಳ್ಳುತ್ತಿದ್ದಾನೆ. ಅಂದಹಾಗೆ, ಈ ಮೊದಲು ಆಫ್ರಿಕಾದಲ್ಲೂ ಇಂತಹ ಅನೇಕ ಪಾದ್ರಿಗಳು ಈ ರೀತಿಯ ಘೋಷಣೆಗಳನ್ನ ಮಾಡಿ ಜನರಿಂದ ಹಣ ಪೀಕಿದ್ದಾರೆ.