ನವದೆಹಲಿ: ‘ಹರ್ ಹರ್ ಶಂಭು’ ಹಾಡಿನ ನಂತರ ಜನಮನಕ್ಕೆ ಬಂದ ಗಾಯಕಿ ಫರ್ಮಾನಿ ನಾಜ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡುತ್ತಿವೆ. ಮೌಲಾನಾಗಳ ಬೆದರಿಕೆಗೆ ಹಾಗು ಫತ್ವಾಗಳಿಗೆ ಬೇಸತ್ತು ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಫರ್ಮಾನಿ ಹೆಸರಿನಲ್ಲಿ ಮಾಡಿರುವ ಹಲವು ಟ್ವಿಟರ್ ಖಾತೆಗಳು ಹೇಳಿಕೊಳ್ಳುತ್ತಿವೆ. ಇದೀಗ ಫರ್ಮಾನಿ ನಾಜ್ ಇಸ್ಲಾಂ ಮತವನ್ನ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ ಸುದ್ದಿಗೆ ಸಂಬಂಧಿಸಿದಂತೆ ಸಿಂಗರ್ನಿಂದ ವೀಡಿಯೊ ಬಿಡುಗಡೆಯಾಗಿದೆ.
ಫೇಕ್ ಐಡಿಗಳ ಮೂಲಕ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ
ಫೇಸ್ ಬುಕ್ ನಲ್ಲಿ ಶೇರ್ ಮಾಡಿರುವ ವೀಡಿಯೋದಲ್ಲಿ ಫರ್ಮಾನಿ ನಾಜ್, “ನನ್ನ ಹೆಸರಿನಲ್ಲಿ ಯಾರೋ ಫೇಕ್ ಐಡಿ ಸೃಷ್ಟಿಸಿ ನಾನು ಹಿಂದೂ ಧರ್ಮವನ್ನು ಅಳವಡಿಸಿಕೊಳ್ಳುತ್ತಿದ್ದೇನೆ ಮತ್ತು ನಾನು ನನ್ನ ಹಿಂದಿನ ಜನ್ಮದಲ್ಲಿ ಹಿಂದೂ ಧರ್ಮವನ್ನು ಆರಾಧಿಸುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ. ಹಾಗೇನೂ ಇಲ್ಲ, ನಾನು ಎಲ್ಲರಿಗೂ ವಿನಂತಿಸುತ್ತೇನೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಂಪ್ಲೇಟ್ ಮಾಡಿ ಯಾರ ಬಗ್ಗೆಯೂ ಹಾಗೆ ಬರೆಯಬಾರದು ಎಂದು ಕೇಳಿಕೊಳ್ಳುತ್ತೇನೆ. ನನ್ನ ಹೆಸರಿನ ಫೇಕ್ ಐಡಿ ಮಾಡಿ ತಪ್ಪು ಕಮೆಂಟ್ ಮಾಡುತ್ತಿರುವವರು ಅನೇಕರಿದ್ದಾರೆ” ಎಂದರು.
ವಿಡಿಯೋ ಶೇರ್ ಮಾಡಿದ ಫರ್ಮಾನಿ
ಇದರ ನಂತರ, ಫರ್ಮಾನಿ ನಾಜ್ ತನ್ನ ಅಧಿಕೃತ ಟ್ವಿಟರ್ ಐಡಿಯನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ಇದು ನನ್ನ ಐಡಿ, ಇಲ್ಲಿ ಹೋಗಿ ಪರಿಶೀಲಿಸಿ, ನಾನು ಆ ರೀತಿ ಏನನ್ನೂ ಬರೆದಿಲ್ಲ ಎಂದು ಫರ್ಮಾನಿ ವಿಡಿಯೋದಲ್ಲಿ ಹೇಳಿದ್ದಾರೆ. ನಾನು ಯಾವ ಧರ್ಮಕ್ಕೆ ಸೇರಿದ್ದೇನೋ ಅದೇ ಧರ್ಮದಲ್ಲಿ ನಾನು ಸಂತೋಷವಾಗಿರುತ್ತೇನೆ. ಯಾರ ಬಗ್ಗೆಯೂ ಯೋಚಿಸದೆ ಇಷ್ಟು ದೊಡ್ಡ ವಿಚಾರ ಹೇಳಬಾರದು. ಸ್ನೇಹಿತರೇ, ಇಂದು ನಾನು… ನಾಳೆ ನೀವೂ ಆಗಬಹುದು. ಯಾರ ಬಗ್ಗೆಯೂ ಯೋಚಿಸದೆ ಇಂತಹ ಬರಹಗಳನ್ನು ಬರೆಯುತ್ತಿರುವವರ ಬಾಯಿ ಮುಚ್ಚಿಸಿ” ಎಂದಿದ್ದಾರೆ.
ನನ್ನ ವಿರುದ್ಧ ಯಾವ ಫತ್ವಾಗಳೂ ಜಾರಿಯಾಗಿಲ್ಲ – ಫರ್ಮಾನಿ
ಸುಳ್ಳು ಸದ್ದಿ ಹರಡುವವರ ID ಗಳನ್ನ ರಿಪೋರ್ಟ್ ಮಾಡುವಂತೆ ತಮ್ಮ ಅಭಿಮಾನಿಗಳಿಗೆ ಫರ್ಮಾನಿ ಹೇಳಿದ್ದಾರೆ. ಅಂತಹವರಿಗೆ ಶಿಕ್ಷೆಯಾಗಬೇಕು ಎಂದು ನಾನು ಕಾನೂನಿನಲ್ಲಿ ಮನವಿ ಮಾಡುತ್ತೇನೆ. ಒಬ್ಬ ಕಲಾವಿದನಿಗೆ ಇದನ್ನೆಲ್ಲಾ ಹೇಳಿದರೆ ಎಷ್ಟು ದುಃಖವಾಗುತ್ತದೆ. ನನ್ನ ಬಗ್ಗೆ ಈ ರೀತಿ ಮಾನಹಾನಿ ಮಾಡಬಾರದು, ನನ್ನ ಬಗ್ಗೆ ಇಂತಹ ವಿಷಯಗಳು ಹರಡಬಾರದು, ನನ್ನ ಹೆಸರಿನಲ್ಲಿ ಅನೇಕ ನಕಲಿ ಐಡಿಗಳನ್ನು ಮಾಡಲಾಗಿದೆ. ಯಾರೂ ನನಗೆ ಬೆದರಿಕೆ ಹಾಕಿಲ್ಲ ಅಥವ ಫತ್ವಾ ಹೊರಡಿಸಿಲ್ಲ, ಎಲ್ಲರೂ ನನ್ನನ್ನು ಹೊಗಳುತ್ತಾರೆ, ಎಲ್ಲರೂ ನನ್ನನ್ನು ಬೆಂಬಲಿಸುತ್ತಾರೆ, ಈ ವದಂತಿಗಳಿಂದ ದೂರವಿರಿ ಎಂದಿದ್ದಾರೆ.
ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ ಫರ್ಮಾನಿ
ಫರ್ಮಾನಿ ನಾಜ್ ಇತ್ತೀಚೆಗೆ ಹರ್ ಹರ್ ಶಂಭು ಹಾಡನ್ನು ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ಅದರ ನಂತರ ಕೆಲವು ಮುಸ್ಲಿಂ ಮೌಲಾನಾಗಳು ಹಿಂದೂ ದೇವರ ಹಾಡನ್ನ ಹಾಡಿದ್ದಕ್ಕೆ ವಿರೋಧಿಸಿದ್ದರು. ಫರ್ಮಾನಿ ನಾಜ್ ಉತ್ತರಪ್ರದೇಶದ ಮುಜಫರ್ನಗರ ಜಿಲ್ಲೆಯ ರತನ್ಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಮ್ಮದ್ಪುರ ಮಾಫಿ ಗ್ರಾಮದ ನಿವಾಸಿ. ಅವರ ಹಲವು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಫರ್ಮಾನಿ ತನ್ನ ಪತಿಯನ್ನು ಹೊರತುಪಡಿಸಿ ತನ್ನ ಸಹೋದರ ಮತ್ತು ತಾಯಿಯೊಂದಿಗೆ ವಾಸಿಸುತ್ತಾಳೆ.
ಮಗನಿಗೆ ಹಾಲು ಕೊಳ್ಳಲು ಆಭರಣ ಮಾರಿದ್ದ ಫರ್ಮಾನಿ
ವರದಿಗಳ ಪ್ರಕಾರ, ಫರ್ಮಾನಿ 2018 ರಲ್ಲಿ ಮೀರತ್ನ ಛೋಟಾ ಹಸನ್ಪುರ್ ಗ್ರಾಮದ ನಿವಾಸಿ ಇಮ್ರಾನ್ ಅವರನ್ನು ವಿವಾಹವಾದರು, ಆದರೆ ಮದುವೆಯಾದ ಒಂದು ವರ್ಷದ ನಂತರ ಮಗನಿಗೆ ಜನ್ಮ ನೀಡಿದರು. ಫರ್ಮಾನಿ ಮಗನಿಗೆ ಗಂಟಲು ನೋವು ಕಾಣಿಸಿಕೊಂಡಿತ್ತು. ಇದಾದ ನಂತರ ಫರ್ಮಾನಿ ಅತ್ತೆ ಕಿರುಕುಳ ನೀಡಲಾರಂಭಿಸಿದರು. ಬಳಿಕ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದಾಳೆ. ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಫರ್ಮಾನಿ ತಾಯಿಯ ಮೇಲೆ ಈಗ ಮಗಳ ಹೊರೆ ಬಿದ್ದಿತ್ತು. ಮಗನಿಗೆ ಊಟ ಹಾಕಲೂ ಹಣವಿಲ್ಲದ ಕಾಲವೊಂದಿತ್ತು. ನನ್ನ ಮಗನಿಗೆ ಹಾಲು ಖರೀದಿಸಲು ನಾನು ಆಭರಣಗಳನ್ನು ಮಾರಾಟ ಮಾಡಬೇಕಾಗಿತ್ತು ಎನ್ನುತ್ತಾರೆ ಫರ್ಮಾನಿ.
ಈಗ ಪ್ರತಿ ತಿಂಗಳು ಇಷ್ಟು ಸಂಪಾದಿಸುತ್ತಿದ್ದಾರೆ ಫರ್ಮಾನಿ
ಒಂದು ದಿನ, ಫರ್ಮಾನಿ ಅವರ ಸೋದರಸಂಬಂಧಿ ಆಕೆಯ ಹಾಡುವುದನ್ನು ಕೇಳಿದಾಗ, ಆಹ ರಾಹುಲ್ ಅವರನ್ನು ಭೇಟಿಯಾಗುವಂತೆ ಮಾಡಿದರು. ಇಲ್ಲಿಂದ ಫರ್ಮಾನಿ ಅದೃಷ್ಟ ತಿರುವು ಪಡೆಯಿತು. ಹಾಡಿಗೆ ಬದಲಾಗಿ ರಾಹುಲ್ ಫರ್ಮಾನಿಗೆ ಹಣ ನೀಡಿದರು. ಇದಾದ ಬಳಿಕ ರಾಹುಲ್ ತನ್ನ ಕೆಲಸಕ್ಕೆ ಫರ್ಮಾನಿ ಅವರನ್ನು ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳಕ್ಕೆ ನೇಮಿಸಿಕೊಂಡಿದ್ದರು. ಫರ್ಮಾನಿ ಮೊದಲ ಹಾಡನ್ನು ಚುಲ್ಹಾದಲ್ಲಿ ರೆಕಾರ್ಡ್ ಮಾಡಲಾಯಿತು. ಇದು ಸಾಕಷ್ಟು ಹಿಟ್ ಆಗಿತ್ತು. ಇದಾದ ನಂತರ ಫರ್ಮಾನಿ ರವರ ಹಲವು ಹಾಡುಗಳು ಒಂದರ ಹಿಂದೆ ಒಂದರಂತೆ ಬಂದವು, ಎಲ್ಲವೂ ಸಾಕಷ್ಟು ಹಿಟ್ ಆದವು. ಈ ದಿನಗಳಲ್ಲಿ, ಫರ್ಮಾನಿ ಅವರು ‘ಹರ್ ಹರ್ ಶಂಭು’ ಹಾಡನ್ನು ಹಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಫರ್ಮಾನಿ ಈಗ ತಿಂಗಳಿಗೆ 35,000 ರೂಪಾಯಿ ಸಂಬಳ ಮತ್ತು ಮೂರು ಯೂಟ್ಯೂಬ್ ಚಾನೆಲ್ಗಳಿಂದ ಬರುವ ಹಣದಲ್ಲಿ ಪಾಲು ಪಡೆಯುತ್ತಾರೆ.