ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಸಿವಿಲ್ ನ್ಯಾಯಾಲಯದಲ್ಲಿ ಶುಕ್ರವಾರ (1 ಜುಲೈ 2022) ಬಾಂ-ಬ್ ಸ್ಫೋ-ಟ ಸಂಭವಿಸಿದೆ. ಸ್ಫೋಟದಲ್ಲಿ ಕಾನ್‌ಸ್ಟೆಬಲ್ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಸ್ಫೋ-ಟ-ವನ್ನು ಯಾವುದೇ ಸಮಾಜ ವಿರೋಧಿ ತತ್ವಗಳು ಮಾಡಿದ್ದಲ್ಲ, ಬದಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯವಾಗಿ ಆಗಮಕುವಾನ್ ಪೊಲೀಸ್ ಠಾಣೆಯ ಪೊಲೀಸರು ಬಾಂ-ಬ್ ಅನ್ನು ನ್ಯಾಯಾಲಯಕ್ಕೆ ತಂದಿದ್ದರು. ಈ ವೇಳೆ ಬಾಂಬ್ ಸ್ಫೋಟಗೊಂಡಿದೆ.
ವರದಿಯ ಪ್ರಕಾರ, ಬಾಂ-ಬ್ ಸ್ಫೋ-ಟ-ದಿಂದಾಗಿ ಕಾನ್‌ಸ್ಟೆಬಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಜೊತೆಗೆ, ಗಾಯಗೊಂಡ ಉಳಿದ ಪೊಲೀಸರನ್ನ ಪಾಟ್ನಾ ಮೆಡಿಕಲ್ ಕಾಲೇಜ್ & ಹಾಸ್ಪಿಟಲ್ ಗೆ (PMCH) ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆದರೆ, ಇನ್ಸ್ ಪೆಕ್ಟರ್ ಮಾತ್ರ ಗಾಯಗೊಂಡಿದ್ದಾರೆ ಎಂದು ಪಾಟ್ನಾದ SSP ಹೇಳಿದ್ದಾರೆ.
ನ್ಯಾಯಾಲಯದಲ್ಲಿ ಸ್ಫೋಟದ ಸುದ್ದಿ ತಿಳಿದ ತಕ್ಷಣ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಆರಂಭದಲ್ಲಿ ಇದು ಯಾರೋ ದಾ-ಳಿ ಮಾಡಿದ್ದಾರೆ ಎಂಬ ಅನುಮಾನವಿತ್ತು. ಆದರೆ, ಬಾಂಬ್ ಅನ್ನು ಸಾಕ್ಷಿಯಾಗಿ ನ್ಯಾಯಾಲಯಕ್ಕೆ ತರಲಾಗಿತ್ತು, ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂದು ನಂತರ ತಿಳಿಯಿತು.
ಆದರೆ, ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಇದೀಗ ಪ್ರಕರಣದ ತನಿಖೆ ಆರಂಭಿಸಲಾಗಿದೆ. ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಪೀರಬಹೋರ್ ಪೊಲೀಸ್ ಠಾಣೆಯ ಪೊಲೀಸರಿಗೆ ನೀಡಲಾಗಿದೆ. ತನಿಖೆಯ ಸಮಯದಲ್ಲಿ, ಬಾಂಬ್ ಅನ್ನು ಸರಿಯಾಗಿ ನಿಷ್ಕ್ರಿಯಗೊಳಿಸಲಾಗಿತ್ತೋ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ.
ಪ್ರಾಸಿಕ್ಯೂಷನ್ ಕಚೇರಿಯಲ್ಲೇ ನಡೆದ ಘಟನೆ
ಪ್ರಾಸಿಕ್ಯೂಷನ್‌ಗೆ ಸಾಕ್ಷಿಯಾಗಿ ಬಾಂಬ್‌ನ್ನ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ತಂದಿದ್ದರು ಎಂದು ಹೇಳಲಾಗಿದೆ. ಪರಿಶೀಲನೆ ಕಾರ್ಯ ಮುಗಿಯುವ ಮುನ್ನವೇ ಕಚೇರಿಯಲ್ಲಿ ಟೇಬಲ್ ಮೇಲೆ ಇಟ್ಟಿದ್ದ ಬಾಂ-ಬ್ ಸ್ಫೋ-ಟ-ಗೊಂಡಿದೆ.
Patna, Bihar | ASI Kadam Kuwan Madan Singh's right hand injured. However, no other injured persons reported: SSP Patna, Manavjit Singh Dhillon
— ANI (@ANI) July 1, 2022
ಎಎನ್‌ಐ ವರದಿ ಪ್ರಕಾರ, ಪಾಟ್ನಾ ಎಸ್‌ಎಸ್‌ಪಿ ಮಾನವಜಿತ್ ಸಿಂಗ್ ಧಿಲ್ಲೋನ್ ಈ ಸ್ಫೋಟದಲ್ಲಿ ಕಡಮ್‌ಕುವಾನ್ ಪೊಲೀಸ್ ಠಾಣೆಯ ಎಎಸ್‌ಐ ಮದನ್ ಸಿಂಗ್ ಅವರ ಬಲಗೈಗೆ ಗಾಯವಾಗಿದೆ ಎಂದು ಘಟನೆಯನ್ನು ಖಚಿತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಪಾಟ್ನಾ ವಿಶ್ವವಿದ್ಯಾಲಯದ ಪಟೇಲ್ ಹಾಸ್ಟೆಲ್‌ನಿಂದ ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಪಾಟ್ನಾ ಹಾಸ್ಟೆಲ್‌ನಲ್ಲಿ ಭಾರೀ ಪ್ರಮಾಣದ ಗನ್‌ಪೌಡರ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್‌ಪೆಕ್ಟರ್ ಉಮಾಕಾಂತ್ ರೈ ಅವರು ಸ್ಫೋಟಕವನ್ನು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ತಂದಿದ್ದರು. ಪೊಲೀಸ್ ಅಧಿಕಾರಿಯು ಸಹಾಯಕ ಪ್ರಾಸಿಕ್ಯೂಷನ್ ಅಧಿಕಾರಿಯ ಮೇಜಿನ ಮೇಲೆ ಇಟ್ಟಿದ್ದ ಪೆಟ್ಟಿಗೆಯಲ್ಲಿ ಬಾಂಬ್‌ಗಳನ್ನು ಇಟ್ಟಿದ್ದರು. ಸ್ಫೋಟವು ಕಡಿಮೆ ತೀವ್ರತೆಯನ್ನು ಹೊಂದಿದೆ ಎಂದು ನಂಬಲಾಗಿದೆ.
ಸ್ಫೋಟದ ನಂತರ, ಮತ್ತೊಂದು ಪೆಟ್ಟಿಗೆಯನ್ನು ಕೋಣೆಯಲ್ಲಿ ಇರಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದರು, ಇದು ನ್ಯಾಯಾಲಯದ ಒಳಗೆ ಭಯದ ವಾತಾವರಣ ಸೃಷ್ಟಿಸಿತ್ತು. ಪಾಟ್ನಾ ಪೊಲೀಸ್‌ನ ಬಾಂಬ್ ನಿಷ್ಕ್ರಿಯ ಘಟಕವು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದಾಗ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಯಿತು. ಬಾಂಬ್ ಅನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲು ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ತಂಡದ ಅಗತ್ಯವಿದೆ ಎಂದು ಅವರು ಹೇಳಿದರು. ಎರಡನೇ ಜೀವಂತ ಬಾಂಬ್ ಅನ್ನು ಸುಮಾರು ಎರಡು ಗಂಟೆಗಳ ಬಳಿಕ ನ್ಯಾಯಾಲಯದಿಂದ ಹೊರಗೆ ತರಲಾಯಿತು.
ನಿಯಮಗಳ ಪ್ರಕಾರ, ಸಾಕ್ಷಿಯಾಗಿ ನ್ಯಾಯಾಲಯಕ್ಕೆ ತಂದ ಯಾವುದೇ ಸ್ಫೋಟಕವನ್ನು ಮೊದಲು ನಿಷ್ಕ್ರಿಯಗೊಳಿಸಬೇಕು.
ಪಾಟ್ನಾ ಹಾಸ್ಟೆಲ್‌ನಲ್ಲಿ ವಶಪಡಿಸಿಕೊಂಡ ಸ್ಫೋಟಕವು ಗನ್‌ಪೌಡರ್ ಆಗಿದ್ದು ಅದನ್ನು ವಿಲೇವಾರಿ ಮಾಡಲಾಗಿರಲಿಲ್ಲ ಮತ್ತು ಘರ್ಷಣೆಯಿಂದ ಉಂಟಾದ ಶಾಖದಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಪೋಲೀಸ್ ತಿಳಿಸಿದ್ದಾರೆ. ನ್ಯಾಯಾಲಯದ ವಿಚಾರಣೆಯ ನಂತರ ಹೆಚ್ಚಿನ ತನಿಖೆಗಾಗಿ ಬಾಂಬ್ ಅನ್ನು ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗುವುದು ಎಂದು ಅವರು ಹೇಳಿದರು.