ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ಹಿಜಾಬ್ ಇಲ್ಲದೆ ಸ್ಪೋರ್ಟ್ ಕ್ಲೈಂಬಿಂಗ್ ಮಾಡಿದ ಇರಾನ್ನ ಎಲ್ನಾಜ್ ರೆಕಾಬಿ ಅಕ್ಟೋಬರ್ನಿಂದ ಸುದ್ದಿಯಲ್ಲಿದ್ದರು. ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ ಆಕೆಯ ಕೊಡುಗೆಗಾಗಿ ಜನರು ಆಕೆಯನ್ನು ಶ್ಲಾಘಿಸುತ್ತಿದ್ದರು. ಆದರೆ ಈಗ ಅವರ ಮನೆಯನ್ನು ಇರಾನ್ ಸರ್ಕಾರ ಕೆ-ಡ-ವಲಾಗಿದೆ ಎಂಬ ಸುದ್ದಿ ಬಂದಿದೆ.
ಘಟನೆಯ ವಿಡಿಯೋವನ್ನು CNN ಹಂಚಿಕೊಂಡಿದೆ. ಅವರ ಮನೆಯ ಅವಶೇಷಗಳು ಹೇಗೆ ನೆಲದ ಮೇಲೆ ಬಿದ್ದಿವೆ ಮತ್ತು ಅದರೊಂದಿಗೆ ಅನೇಕ ಮೆಡಲ್ ಗಳು ನೆಲದ ಮೇಲೆ ಬಿದ್ದಿರುವುದು, ಬಕೆಟ್ಗಳು ಹಾಗು ವಸ್ತುಗಳು ಹೇಗೆ ಚೆಲ್ಲಾಪಿಲ್ಲಿಯಾಗಿವೆ ಎಂಬುದನ್ನು ಈ ವೀಡಿಯೋದಲ್ಲಿ ನೀವು ನೋಡಬಹುದು. ಈ ವಿಡಿಯೋ ಮಾಡುವಾಗ ವ್ಯಕ್ತಿಯೊಬ್ಬರು ಘಟನೆ ಏನು ಎಂಬುದನ್ನ ವಿವರಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಎಲ್ನಾಜ್ ಸಹೋದರ ದಾವೂದ್ ರವರನ್ನೂ ಕಾಣಬಹುದಾಗಿದ್ದು, ಅವರಿಗೂ ಹಿಲ್ ಕ್ಲೈಂಬರ್ ಆಗಿದ್ದು ಹಲವಾರು ಮೆಡಲ್ ಗಳನ್ನ ಗೆದ್ದಿದ್ದಾರೆ.
Last month Iranian police demolished a house which belonged to #Elnaz_Rekabi’s brother, BBC Persian has learned.
Iranian climber Elnaz Rekabi competed without a headscarf at a contest in South Korea in Oct.
She was forced to apologise.Davood, Elnaz’s brother, is also a climber pic.twitter.com/R6xL62Hefx
— Parham Ghobadi (@BBCParham) December 1, 2022
ತಸ್ನಿಮ್ ನ್ಯೂಸ್ ಏಜೆನ್ಸಿ ಈ ಘಟನೆಯ ಬಗ್ಗೆ ಹೇಳುವಂತೆ ರೆಕಾಬಿ ದಕ್ಷಿಣ ಕೊರಿಯಾದಲ್ಲಿ ಹಿಜಾಬ್ ಇಲ್ಲದೆ ಭಾಗವಹಿಸುವ ಮೊದಲೇ ಆಟಗಾರ್ತಿಯ ಮನೆಯನ್ನ ಧ್ವಂ-ಸ ಮಾಡಲಾಗಿದೆ. ಸುದ್ದಿಸಂಸ್ಥೆ ಪ್ರಕಾರ, ರೆಕಾಬಿ ಅವರ ಮನೆ ಕೆಡವಿರುವುದು ನಿಜ, ಆದರೆ ಇದಕ್ಕೆ ಕಾರಣ ದಕ್ಷಿಣ ಕೊರಿಯಾದಲ್ಲಿ ನಡೆದ ಸ್ಪರ್ಧೆಯಲ್ಲ, ಆದರೆ ಮನೆ ನಿರ್ಮಿಸಲು ಕಾನೂನು ಅನುಮತಿ ತೆಗೆದುಕೊಳ್ಳದಿರುವುದು. ಕುಟುಂಬವು ಸುಮಾರು $4,700 ದಂಡವನ್ನು ಪಾವತಿಸಬೇಕಾಗಿತ್ತು ಎಂದು ತಿಳಿಸಿದೆ.
ಅಕ್ಟೋಬರ್ ತಿಂಗಳಲ್ಲಿ, ಹಿಜಾಬ್ ಇಲ್ಲದೆ ಸ್ಪರ್ಧೆಗೆ ಪ್ರವೇಶಿಸಿದ್ದಕ್ಕಾಗಿ ರೆಕಾಬಿ ಬೆಳಕಿಗೆ ಬಂದಿದ್ದರು, ಆದರೆ ಇರಾನ್ಗೆ ಹಿಂದಿರುಗಿದ ನಂತರ, ತನ್ನ ಹಿಜಾಬ್ ಆಕಸ್ಮಿಕವಾಗಿ ಕಳಚಿ ಬಿದ್ದಿತ್ತು ಮತ್ತು ಅದಕ್ಕಾಗಿ ಆಕೆ ಕ್ಷಮೆಯಾಚಿಸಿದ್ದಳು. ಅವರ ಕ್ಷಮೆಯಾಚನೆಯ ನಂತರ, ಆಕೆಗೆ ಬಲವಂತವಾಗಿ ಈ ರೀತಿಯಾಗಿ ಕ್ಷಮೆಯಾಚಿಸಲಾಗಿತ್ತು ಎಂದು ಹೇಳಲಾಗಿತ್ತು. ಆಕೆಯ ಮೇಲೆ ಇರಾನ್ ಸರ್ಕಾರದಿಂದ ಒತ್ತಡವಿತ್ತು ಎಂದೂ ಹೇಳಲಾಗಿತ್ತು.
Elnaz Rekabi, the Iranian rock climber who competed without a hijab on national tv found her house in rubles.
The IRGC demolished her house because she competed without a headscarf. #IranRevolution2022 pic.twitter.com/gzMdM8hDOX
— ArianaJasmine 🔴 on Twitch (@arianajasmine__) December 3, 2022
ಇರಾನ್ ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ
ಸೆಪ್ಟೆಂಬರ್ನಿಂದ ಇರಾನ್ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲಿ ಸೆಪ್ಟೆಂಬರ್ 16 ರಂದು ಮಹ್ಸಾ ಅಮಿನಿ ಕೊ-ಲೆ-ಯಾಗಿದ್ದಳು. ಇದಾದ ಬಳಿಕ ಸಿಟ್ಟಿಗೆದ್ದ ಸಾರ್ವಜನಿಕರು ಬೀದಿಗಿಳಿದು ಇರಾನ್ ಸರ್ಕಾರದ ವಿರುದ್ಧ ಧ್ವನಿ ಎತ್ತತೊಡಗಿದರು. ಯುವತಿಯರು ತಮ್ಮ ಕೂದಲನ್ನು ಕ-ತ್ತ-ರಿಸುವ, ತಮ್ಮ ಹಿಜಾಬ್ ಅನ್ನು ಸು-ಡು-ವ ಅನೇಕ ವೀಡಿಯೊಗಳು ವೈರಲ್ ಆಗಿದ್ದವು.
ಇರಾನ್ನ ಈ ಪ್ರತಿಭಟನೆಯ ಪರಿಣಾಮ ಪ್ರಪಂಚದಾದ್ಯಂತ ಕಂಡುಬಂದಿದೆ. ಪ್ರಪಂಚದಾದ್ಯಂತದ ಸೆಲೆಬ್ರಿಟಿಗಳು ಈ ಮಹಿಳೆಯರ ಬೆಂಬಲಕ್ಕೆ ಬಂದರು ಮತ್ತು ಹಿಜಾಬ್ ಅನ್ನು ಸರಿಯಾಗಿ ಧರಿಸದಿದ್ದಕ್ಕಾಗಿ ಮಹ್ಸಾ ಅಮಿನಿನ್ನು ಕೊ-ಲ್ಲು-ವುದು ತಪ್ಪು ಎಂದು ಬಹಿರಂಗವಾಗಿ ಹಿಜಾಬ್ ವಿರುದ್ಧ ಸಿಡಿದೆದ್ದಿದ್ದರು.