ಹಿಂದುಗಳನ್ನ ಅವಮಾನಿಸಿದ ಅಜಯ್ ದೇವಗನ್ ವಿರುದ್ಧ 3 ಪ್ರಕರಣ ದಾಖಲು: ಲಾಲ್ ಸಿಂಗದ ಚಡ್ಡಾ ಹಾಗು ಬ್ರಹ್ಮಾಸ್ತ್ರದ ಬಳಿಕ ಇದೀಗ ಅಜಯ್ ದೇವಗನ್ ವಿರುದ್ಧ ಕೆಂಡಾಮಂಡಲರಾದ ಹಿಂದುಗಳು

in Uncategorized 122 views

ನವದೆಹಲಿ: ‘ಲಾಲ್ ಸಿಂಗ್ ಚಡ್ಡಾ’ ಮತ್ತು ‘ಬ್ರಹ್ಮಾಸ್ತ್ರ’ ನಂತರ ಇದೀಗ ಅಜಯ್ ದೇವಗನ್ ಅವರ ಮುಂಬರುವ ಚಿತ್ರ ‘ಥ್ಯಾಂಕ್ ಗಾಡ್’ ಈಗ ವಿವಾದಗಳಲ್ಲಿ ಸಿಲುಕಿಕೊಂಡಿದೆ. ಈ ಚಿತ್ರದ ಟ್ರೇಲರ್ ನೋಡಿ ಕಾಯಸ್ಥ ಸಮುದಾಯ ಕೆರಳಿದೆ. ಥ್ಯಾಂಕ್ ಗಾಡ್ ಕಾಮಿಡಿ ಪ್ರಕಾರದ ಚಿತ್ರದಲ್ಲಿ ಅಜಯ್ ದೇವಗನ್ ಚಿತ್ರಗುಪ್ತನ ಪಾತ್ರವನ್ನು ನಿರ್ವಹಿಸಿದ್ದಾರೆ. ಜೌನ್‌ಪುರದಲ್ಲಿ, ಕಾಯಸ್ಥ ಸಮುದಾಯದ ಜನರು ತಮ್ಮ ಆರಾಧ್ಯ ದೇವರಾದ ಚಿತ್ರಗುಪ್ತನನ್ನು ಚಿತ್ರದಲ್ಲಿ ಅಪಹಾಸ್ಯ ಮಾಡುತ್ತ ಗೇಲಿ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣದಲ್ಲಿ ಅಜಯ್ ದೇವಗನ್ ಮತ್ತು ಚಿತ್ರದ ನಿರ್ದೇಶಕ ಇಂದ್ರಕುಮಾರ್ ಸೇರಿದಂತೆ ಮೂವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಚಿತ್ರದ ಟ್ರೇಲರ್‌ನಲ್ಲಿ ಚಿತ್ರಗುಪ್ತನನ್ನು ಮಾಡರ್ನ್ ಆಗಿ ಹಾಗು ಚಿತ್ರದಲ್ಲಿ ಜೋಕ್ ಮಾಡುತ್ತಿರುವ ದೃಶ್ಯಗಳನ್ನ ತೋರಿಸಿದ್ದಾರೆ.

Advertisement

‘ಥ್ಯಾಂಕ್ ಗಾಡ್’ ಚಿತ್ರ ದೀಪಾವಳಿಯಂದು ಬಿಡುಗಡೆಯಾಗಲಿದೆ. ಆನಂದ್ ಶ್ರೀವಾಸ್ತವ, ಬ್ರಿಜೇಶ್ ನಿಶಾದ್, ಮಾನ್ ಸಿಂಗ್, ವಿನೋದ್ ಶ್ರೀವಾಸ್ತವ ಮತ್ತು ರವಿ ಪ್ರಕಾಶ್ ಪಾಲ್ ಅವರು ಚಿತ್ರಗುಪ್ತನನ್ನ ಅಪಮಾನಿಸಿದ್ದಕ್ಕೆ ವಿರುದ್ಧ ಜೌನ್‌ಪುರದ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಧೀಶರು ನವೆಂಬರ್ 18 ರಂದು ಹೇಳಿಕೆ ನೀಡಲು ವಕೀಲ ಮತ್ತು ಪ್ರಮುಖ ಅರ್ಜಿದಾರರಾದ ಹಿಮಾಂಶು ಶ್ರೀವಾಸ್ತವ್ ಅವರನ್ನು ಕರೆದಿದ್ದಾರೆ. ಥ್ಯಾಂಕ್ ಗಾಡ್ ಚಿತ್ರದ ಟ್ರೈಲರ್ ಕುರಿತು ಮಾತನಾಡುವುದಾದರೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ ಎಂದು ತೋರಿಸಲಾಗಿದೆ. ಆಗ ಭಗವಾನ್ ಚಿತ್ರಗುಪ್ತನು ತನ್ನ ಕಾರ್ಯಗಳನ್ನು ದಾಖಲಿಸುತ್ತಾನೆ. ಇಲ್ಲಿ ಅಜಯ್ ದೇವಗನ್ ಕೊಳಕು ಮಾತುಗಳು ಮತ್ತು ಜೋಕ್ ಮಾಡುವುದನ್ನ ತೋರಿಸಲಾಗಿದೆ.

ಈ ಟ್ರೇಲರ್‌ನಲ್ಲಿ ಅಜಯ್ ದೇವಗನ್ ಕೂಡ ನಿಂದನೆಯ ಬಗ್ಗೆ ಜೋಕ್ ಮಾಡಿದ್ದಾರೆ. ಹಿಂದೂ ಧರ್ಮದ ದೇವರ ಮೇಲೆ ಇಂತಹ ತಮಾಷೆ ಮಾಡಬಹುದು ಎಂದು ಇವರು ಹೇಗೆ ಭಾವಿಸುತ್ತಾರೆ. ಅಷ್ಟಕ್ಕೂ, ಚಿತ್ರಗುಪ್ತನನ್ನ ಹೇಗೆ ತಮಾಷೆಯಾಗಿ ತೋರಿಸಬಹುದು ಮತ್ತು ಅವರ ಬಗ್ಗೆ ಹೇಗೆ ತಮಾಷೆ ಮಾಡುವುದನ್ನು ತೋರಿಸಬಹುದು? ತಮ್ಮ ಅರ್ಜಿಯಲ್ಲಿ, ಅರ್ಜಿದಾರ ವಕೀಲ ಹಿಮಾಂಶು ಶ್ರೀವಾಸ್ತವ ಅವರು ಅಜಯ್ ದೇವಗನ್ ಅವರು ಕೆಲವು ಆಕ್ಷೇಪಾರ್ಹ ಪದಗಳನ್ನು ಬಳಸುತ್ತಿರುವ ಜೋಕ್‌ಗಳನ್ನು ನೋಡಿದ್ದೇನೆ ಎಂದು ಹೇಳುತ್ತಾರೆ. ಅವರು ಮಾತನಾಡುತ್ತ, “ಚಿತ್ರಗುಪ್ತನನ್ನು ಕರ್ಮದ ದೇವರು ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ದಾಖಲೆಯನ್ನು ಇಡುತ್ತಾನೆ. ಅಂತಹ ದೇವರ ಚಿತ್ರಣವು ಅಹಿತಕರ ಪರಿಸ್ಥಿತಿಯನ್ನು ಉಂಟುಮಾಡಬಹುದು. ಏಕೆಂದರೆ ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ” ಎಂದಿದ್ದಾರೆ.

ಪುರಾಣಗಳ ಪ್ರಕಾರ, ಭಗವಾನ್ ಚಿತ್ರಗುಪ್ತನು ನ್ಯಾಯದ ದೇವರು ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬ ಮನುಷ್ಯನ ಪಾಪ ಮತ್ತು ಪುಣ್ಯಗಳ ಖಾತೆಯನ್ನು ಅವನು ಹೊಂದಿರುತ್ತಾನೆ ಎಂದು ನಂಬಲಾಗಿದೆ. ‘ಥ್ಯಾಂಕ್ ಗಾಡ್’ ಚಿತ್ರದ ಟ್ರೇಲರ್ ಅನ್ನು ಸೆಪ್ಟೆಂಬರ್ 10 ರಂದು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿದ್ದೇವೆ. ಅದರ ಬಗ್ಗೆ ಮಾಧ್ಯಮಗಳಲ್ಲೂ ಓದಿದ್ದೇವೆ ಎಂದು ಪ್ರಕರಣ ದಾಖಲಿಸಿರುವ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಟ್ರೇಲರ್‌ನಲ್ಲಿ ಭಗವಾನ್ ಚಿತ್ರಗುಪ್ತನನ್ನ ಅವಮಾನಿಸಲಾಗಿದೆ. ಇದರಿಂದ ಕಾಯಸ್ಥ ಸಮುದಾಯ ಹಾಗೂ ಸಾಕ್ಷಿದಾರರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ‘ಥ್ಯಾಂಕ್ ಗಾಡ್’ ಚಿತ್ರ ನಮ್ಮ ಸಮುದಾಯಕ್ಕೆ ಅವಮಾನ ಮತ್ತು ನಮ್ಮ ವಿರುದ್ಧ ದ್ವೇಷವನ್ನು ಹರಡಬಹುದು ಎಂದು ದೂರುದಾರರು ಆರೋಪಿಸಿದ್ದಾರೆ. ಬಾಲಿವುಡ್ ಕಡೆಯಿಂದ ಇಂತಹ ದೃಶ್ಯಗಳನ್ನು ಚಿತ್ರೀಕರಿಸುವುದರಿಂದ ಶಾಂತಿ ಕದಡಬಹುದು. ಆದ್ದರಿಂದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಅರ್ಜಿದಾರರು ಹೇಳಿದ್ದಾರೆ.

Advertisement
Share this on...