ಉತ್ತರ ಪ್ರದೇಶದ ಮುಸ್ಲಿಂ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಓಡಿಹೋಗಿ ಹಿಂದೂ ಧರ್ಮ ಸ್ವೀಕರಿಸಿ ನಂತರ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾಳೆ. ಮದುವೆಯ ನಂತರ ತನಗೆ ಹಾಗೂ ಪತಿಗೆ ಜೀವ ಬೆದರಿಕೆ ಇದೆ ಎಂದು ಹೇಳಿ ಭದ್ರತೆ ನೀಡುವಂತೆ ಯುವತಿ ಮನವಿ ಮಾಡಿದ್ದಾಳೆ.
ಈ ಪ್ರಕರಣ ಉತ್ತರಪ್ರದೇಶದ ಬದಾಯು ಜಿಲ್ಲೆಯದ್ದಾಗಿದೆ. ಇಲ್ಲಿನ ನಿವಾಸಿ ಮುಸ್ಲಿಂ ಯುವತಿ ಇಲ್ಮಾ ಖಾನ್ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದು, ಆತನನ್ನೇ ಮದುವೆಯಾಗಲು ಬಯಸಿದ್ದಳು. ಆದರೆ, ಇಲ್ಮಾಳ ಕುಟುಂಬ ಸದಸ್ಯರು ಆಕೆಯ ನಿರ್ಧಾರವನ್ನ ಬಲವಾಗಿ ವಿರೋಧಿಸಿದ್ದರು. ಇದಾದ ನಂತರ ಇಲ್ಮಾ ಖಾನ್ ಸೋಮೇಶ್ ಜೊತೆ ಓಡಿಹೋಗಲು ನಿರ್ಧರಿಸಿದಳು.
ಸೋಮೇಶ್‌ನೊಂದಿಗೆ ಮನೆಯಿಂದ ಓಡಿಬಂದ ನಂತರ, ಇಲ್ಮಾ ಬರೇಲಿಯ ಆಗಸ್ತ್ಯ ಮುನಿ ಆಶ್ರಮದಲ್ಲಿ ಇಸ್ಲಾಂ ಧರ್ಮವನ್ನು ತ್ಯಜಿಸಿದಳು. ಇಲ್ಮಾಳನ್ನ ದೇವಾಲಯದ ಅರ್ಚಕರು ಶುದ್ಧೀಕರಿಸಿದರು, ನಂತರ ಆಕೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಳು. ಹಿಂದೂ ಆದ ನಂತರ ಆಕೆ ತನ್ನ ಹೆಸರನ್ನು ಸೌಮ್ಯ ಎಂದು ಬದಲಾಯಿಸಿಕೊಂಡಳು. ಇದಾದ ನಂತರ ಸೌಮ್ಯಾ ದೇವಸ್ಥಾನದಲ್ಲಿ ಸೋಮೇಶ್ ಶರ್ಮಾ ಜೊತೆ ವಿವಾಹವಾಗಿದ್ದಾಳೆ.
ಯುವತಿಯ ಮನೆಗೆ ಆಗಾಗ್ಗೆ ಹೋಗಿ ಬರುತ್ತಿದ್ದೆ. ಇದಾದ ಬಳಿಕ ಇಬ್ಬರ ನಡುವೆ ಪರಿಚಯ, ಸ್ನೇಹ ಏರ್ಪಟ್ಟಿತ್ತು. ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತು. ಇದಾದ ಬಳಿಕ ಇಬ್ಬರೂ ಮದುವೆಯಾಗಲು ನಿರ್ಧರಿಸಿದೆವು ಎನ್ನುತ್ತಾರೆ ಸೌಮ್ಯಾಳ ಪತಿ ಸೋಮೇಶ್ ಶರ್ಮಾ.
ಹಿಂದೂ ಧರ್ಮವನ್ನು ಮತಾಂತರಗೊಳ್ಳುವ ಬಗ್ಗೆ ಮಾತನಾಡಿದ ಸೋಮೇಶ್, ಸೌಮ್ಯಾಗೆ ಸಹ ಒಬ್ಬ ಸಹೋದರಿಯೂ ಇದ್ದಾಳೆ, ಆಕೆಗೆ ವಿವಾಹವಾಗಿದೆ, ಆದರೆ ಆಕೆಯ ಪತಿ ಮತ್ತು ಕುಟುಂಬದವರು ಆಕೆಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಸೌಮ್ಯಾಗೆ ತುಂಬಾ ದುಃಖವಾಯಿತು. ಕ್ರಮೇಣ ಆಕೆ ಹಿಂದೂ ಧರ್ಮದ ಕಡೆಗೆ ಒಲವು ತೋರಿದಳು ಮತ್ತು ಇಲ್ಮಾ ಖಾನ್‌ನಿಂದ ಸೌಮ್ಯಳಾದಳು ಎಂದಿದ್ದಾರೆ.
ಹಿಂದೂ ಧರ್ಮ ಅಪ್ಪಿಕೊಂಡ ಇಲ್ಮಾ ಖಾನ್ ಅವರನ್ನು ವಿವಾಹವಾದ ನಂತರ, ಇಬ್ಬರಿಗೂ ಆಕೆಯ ಕುಟುಂಬ ಸದಸ್ಯರ ಜೀವಕ್ಕೆ ಬೆದರಿಕೆ ಇದೆ ಎಂದು ಸೋಮೇಶ್ ಹೇಳಿದ್ದಾರೆ. ಸೌಮ್ಯಳ ಮನೆಯ ಪಕ್ಕದಲ್ಲಿ ಗ್ರಾಮದ ಸರ್‌ಪಂಚ್ ಮನೆ ಮನೆ ಇದೆ, ಅವರು ನಮ್ಮನ್ನ ಸುಮ್ಮನೆ ಬಿಡಲ್ಲ. ನಾನು ಸೌಮ್ಯಾ ಭೇಟಿಯಾದಲ್ಲೆಲ್ಲಾ ಸರ್‌ಪಂಚ್ ತನಗೆ ಕೊಲೆ ಬೆದರಿಕೆ ಹಾಕುತ್ತಿದ್ದ ಎಂದು ಸೋಮೇಶ್ ಹೇಳಿದ್ದಾರೆ.
ಇತ್ತ ಇಲ್ಮಾ ಳಿಂದ ಸೌಮ್ಯಾ ಆದ ಯುವತಿ ಮಾತನಾಡುತ್ತ, “ಸೋಮೇಶ ಬಾಲ್ಯದಿಂದಲೂ ನಮ್ಮ ಮನೆಗೆ ಬರುತ್ತಿದ್ದ. ಮೊದಲು ನಾವು ಸ್ನೇಹಿತರಾಗಿದ್ದೆವು, ನಂತರ ನಮ್ಮ ಸ್ನೇಹ ಪ್ರೀತಿಗೆ ತಿರುಗಿತು ಈಗ ನಾವು ಮದುವೆಯಾಗಿದ್ದೇವೆ. ಯಾವುದೇ ಒತ್ತಡ ಅಥವಾ ದುರಾಸೆಗೆ ಒಳಗಾಗಿ ಮತಾಂತರಗೊಂಡಿಲ್ಲ, ಸ್ವ ಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ” ಎಂದು ಸೌಮ್ಯಾ ಹೇಳಿದ್ದಾರೆ.
ಇಸ್ಲಾಂನಲ್ಲಿ ತ್ರಿವಳಿ ತಲಾಖ್, ನಿಕಾಹ್ ಹಲಾಲಾ ಇದೆ, ಅದು ನನಗೆ ಇಷ್ಟವಿಲ್ಲ. ಹಿಂದೂ ಹುಡುಗನನ್ನು ಮದುವೆಯಾಗುವ ಮೂಲಕ ನಾಮು ಸುರಕ್ಷಿತಳಾಗಿದ್ದೇನೆ. ಮದುವೆಯ ನಂತರ ನನ್ನ ಅಕ್ಕನ ಮನೆಯವರು ತುಂಬಾ ಜಗಳವಾಡುತ್ತಿದ್ದರು. ಆಗೊಮ್ಮೆ ಈಗೊಮ್ಮೆ ತಲಾಕ್ ಬೆದರಿಕೆ ಹಾಕುತ್ತಲೇ ಇರುತ್ತಾರೆ, ಆದರೆ ಹಿಂದೂ ಧರ್ಮದಲ್ಲಿ ತಲಾಕ್ ನಂತಹ ಅನಿಷ್ಟ ಪದ್ದತಿ ಎಂಬುದೇ ಇಲ್ಲ ಎಂದು ಸೌಮ್ಯಾ ಹೇಳಿದ್ದಾರೆ.
“ನನ್ನ ತಂದೆ ಹಳ್ಳಿಯಲ್ಲಿ ಟೈಲರ್ ಆಗಿದ್ದು, ತನಗೆ ಆರು ಜನ ಸಹೋದರಿಯರಿದ್ದಾರೆ ಎಂದು ಸೌಮ್ಯಾ ಹೇಳಿದ್ದಾರೆ. ಸೋಮೇಶ್ ಬಗ್ಗೆ ಮನೆಯವರಿಗೆ ತಿಳಿದಾಗ ನನಗೆ ಥಳಿಸಿದ್ದರು. ಆ ನಂತರ ಮನೆ ಬಿಟ್ಟು ಸೋಮೇಶನೊಂದಿಗೆ ಹೊರಟು ಬಂದೆ” ಎಂದು ಸೌಮ್ಯಾ ತಿಳಸಿದರು. ಸೋಮೇಶ್ ಶರ್ಮಾ ದೆಹಲಿಯಲ್ಲಿ ಖಾಸಗಿ ಉದ್ಯೋಗ ಮಾಡುತ್ತಿದ್ದಾರೆ. ಸೋಮೇಶ್ ಹಾಗೂ ಆತನ ಕುಟುಂಬಸ್ಥರಿಗೆ ತನ್ನ ಕುಟುಂಬಸ್ಥರಿಂದ ಪ್ರಾಣಾಪಾಯವಿದೆ ಎಂದು ಇಲ್ಮಾ ಪೊಲೀಸ್ ರಕ್ಷಣೆ ಕೋರಿದ್ದಾರೆ.