ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಸುಜೈನ್ ಖಾನ್ ಅವರನ್ನು ಮದುವೆಯಾದ ನಂತರವೂ ಅನೇಕರೊಂದಿಗೆ ಅಫೇರ್ ಹೊಂದಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅನೇಕ ನಟಿಯರ ಹೆಸರುಗಳು ಹೃತಿಕ್ ರೋಷನ್ ಜೊತೆ ತಳಕು ಹಾಕಿಕೊಂಡಿವೆ. ಇದು ಕರೀನಾ ಕಪೂರ್ ಖಾನ್‌ನಿಂದ ಬಾರ್ಬರಾ ಮೋರಿ, ಕಂಗನಾ ರನಾವತ್ ವರೆಗಿನ ಹೆಸರುಗಳನ್ನು ಒಳಗೊಂಡಿದೆ. ಆದರೆ ಹೃತಿಕ್ ಒಂದು ಕಾಲದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಮಗಳು ಶ್ವೇತಾ ಬಚ್ಚನ್ ಅವರೊಂದಿಗೂ ಅಫೇರ್ ಹೊಂದಿದ್ದರು ಎಂಬುದು ನಿಮಗೆ ಗೊತ್ತೇ?. ಈ ಸುದ್ದಿಗಳು ಒಂದು ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ಸಂಚಲನವನ್ನೇ ಸೃಷ್ಟಿಸಿದ್ದವು. ಆದರೆ ಕಾರಣಾಂತರಗಳಿಂದ ಈ ಸುದ್ದಿಯನ್ನು ಮರೆಮಾಚಲಾಯಿತು. ಅದೇ ವೇಳೆ ಇಬ್ಬರನ್ನೂ ಬೇರೆ ಮಾಡಲು ಬಿಗ್ ಬಿ ಸಾಕಷ್ಟು ಹರಸಾಹಸ ಪಡಬೇಕಾಯಿತು. ಇಂದು ನಾವು ಇದರ ಬಗ್ಗೆಯೇ ನಿಮಗೆ ಹೇಳಲಿದ್ದೇವೆ.
ಮಾಧ್ಯಮ ವರದಿಗಳ ಪ್ರಕಾರ, ಹೃತಿಕ್ ಮತ್ತು ಶ್ವೇತಾ ಅವರ ಅಫೇರ್ ಶುರುವಾಗಿದ್ದರ ಹಿಂದೆಯೂ ಒಂದು ಸ್ಟೋರಿತಿದೆ. ಯಾವುದೋ ಚಿತ್ರೀಕರಣದ ಸಮಯದಲ್ಲಿ ಹೃತಿಕ್ ರೋಷನ್ ಗಾಯಗೊಂಡಿದ್ದರು ಆಗ ಹೃತಿಕ್ ಹಾಗು ಶ್ವೇತಾ ಬಚ್ಚನ್ ನಡುವೆ ಕ್ಲೋಸ್‌ನೆಸ್ ಶುರುವಾಯಿತು. ಶ್ವೇತಾ ತನ್ನ ಅಣ್ಣ ಅಭಿಷೇಕ್ ಬಚ್ಚನ್ ಜೊತೆಗೆ ಹೃತಿಕ್ ಅವರ ಮನೆಗೆ ಹೋಗಿದ್ದರು. ಅದರ ನಂತರ ಅಭಿಷೇಕ್ ಅನುಪಸ್ಥಿತಿಯಲ್ಲೇ ಶ್ವೇತಾ ಹೃತಿಕ್ ಅವರನ್ನು ಭೇಟಿಯಾಗಲು ಹಲವಾರು ಬಾರಿ ಹೋಗಿದ್ದರು. ಈ ವೇಳೆ ಇಬ್ಬರೂ ಪರಸ್ಪರ ಹತ್ತಿರವಾದರು. ಈಗಾಗಲೇ ಮದುವೆಯಾಗಿದ್ರೂ ಶ್ವೇತಾ ಹೃತಿಕ್ ನನ್ನು ಇಷ್ಟಪಡತೊಡಗಿದ್ದಳು.
ಇತ್ತೀಚೆಗಷ್ಟೇ ಶ್ವೇತಾ ಬಚ್ಚನ್ ದೆಹಲಿಯಿಂದ ಮುಂಬೈಗೆ ಶಿಫ್ಟ್ ಆಗಿದ್ದಾರೆ ಎಂಬ ವರದಿಗಳು ಬಂದಿದ್ದು ನಿಮಗೆ ಗೊತ್ತೇ ಇದೆ. ಶ್ವೇತಾ ಬಚ್ಚನ್ ದೆಹಲಿಯಿಂದ ಮುಂಬೈಗೆ ತನ್ನ ಮಕ್ಕಳನ್ನು ಮತ್ತು ಪತಿಯನ್ನು ಬಿಟ್ಟು ನಟ ಹೃತಿಕ್ ಅವರೊಂದಿಗೆ ಹೆಚ್ಚು ಸಮಯ ಕಳೆಯಲೆಂದೇ ಶಿಫ್ಟ್ ಆಗಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ಭಾರೀ ಸುದ್ದಿಗೆ ಗ್ರಾಸವಾಗಿತ್ತು ಮತ್ತು ಎಲ್ಲರೂ ಶ್ವೇತಾ ಹಾಗು ಹೃತಿಕ್ ನಡುವಿನ ಅಫೇರ್ ಬಗ್ಗೆ ಚರ್ಚಿಸಲು ಪ್ರಾರಂಭಿಸಿದರು. ಹೀಗಿರುವಾಗ ಮಗಳ ವೈವಾಹಿಕ ಜೀವನ ಉಳಿಸಲು ಬಿಗ್ ಬಿ ಒಂದು ಉಪಾಯ ಮಾಡಿದರು.
ಸುದ್ದಿ ಮೂಲಗಳ ಪ್ರಕಾರ, ಅಮಿತಾಬ್ ಬಚ್ಚನ್ ಹೃತಿಕ್ ಜೊತೆಗಿನ ಸಂಬಂಧವನ್ನು ಮುರಿದುಕೊಂಡರು ಮತ್ತು ಅವರನ್ನು ಭೇಟಿಯಾಗುವುದನ್ನು ನಿಲ್ಲಿಸಿದರು. ಇದರೊಂದಿಗೆ ಶ್ವೇತಾಳನ್ನೂ ಅವನ ಹತ್ತಿರ ಹೋಗದಂತೆ ಕಟ್ಟುನಿಟ್ಟಾಗಿ ತಡೆದರು. ಅಂತಹ ಪರಿಸ್ಥಿತಿಯಲ್ಲಿ ಶ್ವೇತಾ ನಟನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಶ್ವೇತಾ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಲು ಮುಂಬೈಗೆ ಶಿಫ್ಟ್ ಆಗಿದ್ದಾರೆ, ಏಕೆಂದರೆ ಈಗ ಅವರು ಸ್ವಂತ ಕಾಲಿನ ಮೇಲೆ ನಿಲ್ಲಲು ಬಯಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹರಡಿತು. ಆದರೆ, ಈ ವಿಚಾರದಲ್ಲಿ ಎಷ್ಟು ಸತ್ಯ ಅನ್ನೋದು ಹೃತಿಕ್ ಅಥವಾ ಶ್ವೇತಾ ಬಚ್ಚನ್ ಅವರಿಗೇ ಗೊತ್ತು. ಹೀಗಾಗಿ ಈ ಎಲ್ಲಾ ಕಾಂಟ್ರವರ್ಸಿ ಬಗ್ಗೆ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಆದರೆ ಇವರಿಬ್ಬರ ನಡುವಿನ ಅಫೇರ್ ಬಗೆಗಿನ ಸುದ್ದಿ ಮಾತ್ರ ಈಗಲೂ ಬೂದಿ ಮುಚ್ಚಿದ ಕೆಂಡದಂತೆ ಹರಿದಾಡುತ್ತಲೇ ಇದೆ.