“ಹೆಲೋ ಎಲ್ಲಿದೀಯಪ್ಪಾ? ನಿನ್ನ ಮೇಲೆ ನನಗೆ ಡೌಟೇ ಇಲ್ಲ, ಬೇಗ ಮನೆಗ್ ಬಾ ಮಾತಾಡೋಣ” ಎಂದು ಸಭೆಯಲ್ಲೇ ಸಿದ್ದರಾಮಯ್ಯ ಫೋನ್ ಮಾಡಿದ್ದು ಯಾರಿಗೆ?

in Kannada News/News 168 views

ಬೆಂಗಳೂರು:

Advertisement
ಹಲೋ ಎಲ್ಲಿದ್ದೀಯಾ? ನಿನ್ನ ಮೇಲೆ ಡೌಟ್ ಇಲ್ಲ, ಬಾ ಮನೆಗೆ ಮಾತಾಡೋಣ ಎಂದು ಶಿಷ್ಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರೆ.

ಇಡಿ ದಾ ಳಿ ನಂತರ ಮುನಿಸಿಕೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಅಂತರ ಕಾಯ್ದುಕೊಂಡಿದ್ದಾರೆ. ಇಂದು ಸಿದ್ದರಾಮಯ್ಯರಿಗೆ ಕರೆ ಮಾಡಿ ಜನ್ಮ ದಿನದ ಶುಭ ಕೋರಿದ್ದಾರೆ. ಸಿದ್ದರಾಮಯ್ಯನವರು ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಜಮೀರ್ ಅಹಮ್ಮದ್ ಕರೆ ಮಾಡಿದ್ದರಿಂದ ಮಾಧ್ಯಮಗಳ ಮುಂದೆ ಶಾಸಕರ ಜೊತೆ ಮಾಜಿ ಸಿಎಂ ಮಾತುಕತೆ ನಡೆಸಿದರು.

ಹಲೋ ಎಲ್ಲಿದ್ದೀಯಾ?

ಹಲೋ ಎಲ್ಲಿದ್ದೀಯಾ ನೀನು ಎಂದು ಕೇಳಿದಾಗ ತಾವು ಹೈದರಾಬಾದ್ ನಲ್ಲಿರೋದಾಗಿ ತಿಳಿಸಿದರು. ನಿಮ್ಮ ಮೇಲೆ ಯಾಕೆ ಅನುಮಾನ ಮಾಡಲಿ. ನನ್ನ ಜೀವನದಲ್ಲಿ ಅದೆಲ್ಲ ಇಲ್ಲ. ಮಾಧ್ಯಮದವರೇ ಏನೇನೋ ಹುಟ್ಟುಹಾಕ್ತಾರೆ. ನಾಳೆ ಮನೆಗೆ ಬಾ ಮಾತಾಡೋಣ ಎಂದು ಆಹ್ವಾನ ನೀಡಿದರು.

ಈ ಕರೆ ಸಿದ್ದರಾಮಯ್ಯ ಆಪ್ತ ವಲಯದ ಪಕ್ಕಾ ಪ್ಲಾನ್ಡ್ ಫೋನ್ ಕಾಲ್ ನಂತಿತ್ತು. ಬೆಳಗ್ಗೆಯಿಂದ 10 ಬಾರಿ ಕರೆ ಮಾಡಿದ್ರೂ ಮಾತಾಡೋಕೆ ಆಗಿಲ್ಲ, ಮಾತಾಡಿ ಎಂದು ಶಾಸಕ ಬೈರತಿ ಸುರೇಶ್ ಸುದ್ದಿಗೋಷ್ಠಿ ಮಧ್ಯೆಯೇ ಸಿದ್ದರಾಮಯ್ಯಗೆ ಫೋನ್ ನೀಡಿದರು.

ಇದನ್ನೂ ಓದಿ: ಸಿದ್ದರಾಮಯ್ಯನವರ ಮನೆಗೇ ತೆರಳಿ ವಿಷ್ ಮಾಡಿದ ಎಂಪಿ ಕುಮಾರಸ್ವಾಮಿ

ಮಹತ್ವದ ಬೆಳವಣಿಗೆಯಲ್ಲಿ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಗುರುವಾರ ಬೆಳಗ್ಗೆಯಷ್ಟೇ ವಿಧಾನಸೌಧದಲ್ಲಿ ತಮ್ಮದೇ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದಾಗಿ ಕೆಲ ಹೊತ್ತಿನಲ್ಲಿಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮೂಡಿಗೆರೆ ಶಾಸಕರು ಭೇಟಿ ಮಾಡಿದ್ದಾರೆ. ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಪ್ರತಿಭಟಸಿ, ಬಳಿಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.

ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಧಾನಸೌಧದ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ಆರಂಭಿಸಿದ್ದರು. ಬಳಿಕ ಸದರಿ ಸ್ಥಳಕ್ಕೆ ತೆರಳಿದ್ದ ಕಂದಾಯ ಸಚಿವ ಆರ್. ಅಶೋಕ ಸಂಧಾನ ಮಾಡಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮಾಡಿದ್ದರು. ಬುಧವಾರವಷ್ಟೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಬೆದರಿಕೆಯನ್ನು ಸಚಿವರಾದ ಆನಂದ್ ಸಿಂಗ್, ಎಂ.ಟಿ.ಬಿ. ನಾಗರಾಜ್ ಹಾಕಿದ್ದರು. ಅವರನ್ನು ಸಮಾಧಾನ ಮಾಡಲಾಗಿದೆ ಎನ್ನುವಷ್ಟರಲ್ಲಿ ಶಾಸಕ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಸಂಧಾನ ಮಾಡಲು ಕಂದಾಯ ಸಚಿವ ಆರ್. ಅಶೋಕ್ ವಿಧಾನಸೌಧದ ತಮ್ಮ ಕಚೇರಿಗೆ ಶಾಸಕ ಕುಮಾರಸ್ವಾಮಿ ಅವರನ್ನು ಕರೆದೊಯ್ದಿದ್ದರು. ಬಳಿಕ ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡುತ್ತಿಲ್ಲ. ಅದಕ್ಕೆ ರಾಜಕೀಯ ಕಾರಣಗಳಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತುಳಿಯುತ್ತಿದ್ದಾರೆಂಬ ಆರೋಪವನ್ನೂ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾಡಿದ್ದರು.

ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದ ಸಿ.ಟಿ. ರವಿ, ಶಾಸಕ ಎಂ.ಪಿ. ಕುಮಾರಸ್ವಾಮಿ ಆರು ಬಾರಿ ಶಾಸಕರಾಗಿದ್ದಾರೆ. ಪಾರ್ಟಿ ಅವಕಾಶ ಕೊಡದಿದ್ದರೆ ನಾವ್ಯಾರು? ನಾರಾಯಣಸ್ವಾಮಿ ಅವರಿಗೂ ಕಾರ್ಯಕರ್ತರೆ ಮಾಲೀಕರು, ನನಗೂ ಕಾರ್ಯಕರ್ತರೇ ಮಾಲೀಕರು. ಕ್ಷೇತ್ರವನ್ನು ಮೀಸಲಾತಿ ಪಟ್ಟಿಯಿಂದ ತೆಗೆಯುವುದು ಅವರ ಕೈಯಲಿಲ್ಲ. ನಮ್ಮ‌ ಕೈಯಲ್ಲಿಯೂ ಇಲ್ಲ. ಅದು ಇರುವುದು ಚುನಾವಣಾ ಆಯೋಗದ ಕೈಯಲ್ಲಿ ಎಂದು ತಮ್ಮದೇ ಪಕ್ಷದ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಶಾಸಕ ಎಂ.ಪಿ. ಕುಮಾರಸ್ವಾಮಿ ಮಾಡಿದ್ದು ಗಮನ ಸೆಳೆದಿತ್ತು. ಭೇಟಿ ಹಿಂದಿನ ಮರ್ಮವೂ ಈಗ ಬಹಿರಂಗವಾಗಿದೆ.

ತಮ್ಮದೇ ಪಕ್ಷದ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ಭೇಟಿ ಮಾಡಿದ್ದರು. ಆಗಸ್ಟ್‌ 12 ಸಿದ್ದರಾಮಯ್ಯ ಅವರ ಹುಟ್ಟುಹಬ್ಬ. ಹೀಗಾಗಿ ಹುಟ್ಟುಹಬ್ಬದ ಶುಭಾಶಯ ಹೇಳಲು ಬಂದಿದ್ದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಕುಮಾರಸ್ವಾಮಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಮಾತುಕತೆಯನ್ನು ನಡೆಸಿ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಹಿಂದಿರುಗಿದ್ದಾರೆ.

ದಿಢೀರ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದ್ದು, ಇದೀಗ ಹುಟ್ಟುಹಬ್ಬ ಶುಭಾಶಯ ಕೋರಿದ್ದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೂ ಬಿಜೆಪಿ ನಾಯಕರು ಅವರ ಭೇಟಿಯನ್ನು ಸಂಶಯದ ದೃಷ್ಟಿಯಿಂದಲೇ ನೋಡಿದ್ದಾರೆ ಎನ್ನಲಾಗುತ್ತಿದೆ.

Advertisement
Share this on...