“ಹೌದು ಶೃದ್ಧಾಳನ್ನ ನಾನೇ ಕೊಂ-ದಿದ್ದು, ಈ ದೇಶದ ಕಾನೂನಿಗೆ ತಾಕತ್ತಿದ್ರೆ ನನ್ನನ್ನ….”: ಅಫ್ತಾಬ್ ಪೂನಾವಾಲಾ

in Uncategorized 2,443 views

ಶ್ರದ್ಧಾ ವಾಕರ್ ಹ-ತ್ಯೆ ಪ್ರಕರಣವನ್ನು ಭೇದಿಸುವ ಭರದಲ್ಲಿ ಪೊಲೀಸರೇ ಕನ್‌ಫ್ಯೂಸ್ ಆಗಿದ್ದಾರೆ. ಶ್ರದ್ಧಾಳನ್ನು ಕೊಂ-ದಿ-ದ್ದು ಅಫ್ತಾಬ್ ಪೂನವಾಲಾ ಎಂಬುದಕ್ಕೆ ದೆಹಲಿ ಪೊಲೀಸರ ಬಳಿ ಇನ್ನೂ ಯಾವುದೇ ಸ್ಪಷ್ಟ ಸಾಕ್ಷ್ಯಗಳಿಲ್ಲ. ಪಾಲಿಗ್ರಾಫ್ ಟೆಸ್ಟ್ ಮತ್ತು ನಾರ್ಕೋ ಟೆಸ್ಟ್ ನಲ್ಲಿ ಉ-ಗ್ರ ಆರೋಪಿ ಪೊಲೀಸರನ್ನು ದಿಕ್ಕು ತಪ್ಪಿಸಿದ್ದಾನೆ. ಇದೇ ವೇಳೆ ಶ್ರದ್ಧಾಳನ್ನು ಕೊಂ-ದ ಬಗ್ಗೆ ಅಫ್ತಾಬ್ ಈ ದೇಶದ ಕಾನೂನು ಹಾಗು ಪೋಲಿಸರಿಗೇ ಬಹಿರಂಗ ಸವಾಲು ಹಾಕಿದ್ದಾನೆ.

Advertisement

ಶ್ರದ್ಧಾಳನ್ನು ಕೊಂ-ದ ಬಳಿಕ ಆರೋಪಿ ಅಫ್ತಾಬ್ ಪೊಲೀಸರ ದಾರಿ ತಪ್ಪಿಸುವ ಪ್ಲಾನ್ ಮಾಡಿದ್ದಾನೆ. ಇದಕ್ಕಾಗಿ ಆತ ವಿಶ್ವದ ಅತ್ಯಂತ ದುಬಾರಿ ಪ್ರಯೋಗವನ್ನು ಇಂಟರ್ನೆಟ್‌ನಲ್ಲಿ ಹಲವಾರು ಬಾರಿ ಲೈವ್ ಆಗಿ ನೋಡಿದ್ದಾನೆ ಮತ್ತು ಓದಿದ್ದಾನೆ, ಆದ್ದರಿಂದ ಆತ ದೇಶದ ಕಾನೂನನ್ನ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾನೆ. ಹಾಲಿವುಡ್ ನಟ ಜಾನಿ ಡೆಪ್ ಮತ್ತು ಅವರ ಪತ್ನಿ ಅಂಬರ್ ಹರ್ಡ್ ನಡುವೆ ನಡೆದ ಕೇಸ್ ಒಂದನ್ನ ಅಫ್ತಾಬ್ ಹಲವು ಬಾರಿ ನೋಡಿದ್ದಾನೆ. ಆರೋಪಿ ಅಫ್ತಾಬ್‌ನ ಇಂಟರ್ನೆಟ್ ಸರ್ಚ್ ಹಿಸ್ಟರಿಯಿಂದ ಪೊಲೀಸರು ಇದನ್ನು ಪತ್ತೆ ಹಚ್ಚಿದ್ದಾರೆ. ಹಾಲಿವುಡ್‌ನ ಈ ಕೇಸ್ ನ ನೆರವಿನಿಂದ ಆರೋಪಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಗಮನಿಸುವ ಸಂಗತಿಯೆಂದರೆ, ಅಫ್ತಾಬ್ ತನ್ನ ಲಿವ್-ಇನ್ ಪಾರ್ಟನರ್ ಶ್ರದ್ಧಾಳನ್ನು ಬ-ರ್ಬ-ರವಾಗಿ ಹ-ತ್ಯೆ ಮಾಡಿದ್ದ. ಇದಾದ ನಂತರ ಆರೋಪಿ ಶೃದ್ಧಾಳ ದೇ-ಹ-ವನ್ನು 35 ತುಂ-ಡು-ಗಳಾಗಿ ಕ-ತ್ತ-ರಿ-ಸಿ ಕಾಡಿನಲ್ಲಿ ಎಸೆದಿದ್ದ. ದೆಹಲಿ ಮತ್ತು ಮುಂಬೈ ಪೊಲೀಸರು ಈ ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ, ಆದರೆ ಇದುವರೆಗೂ ಪೊಲೀಸರಿಗೆ ಪ್ರಕರಣವನ್ನ ಭೇದಿಸುವುದು ಬಿಡಿ ಅಫ್ತಾಬ್ ವಿರುದ್ಧ ಸಾಕ್ಷಿಗಳೇ ಸಿಕ್ಕಿಲ್ಲ.

ಇದನ್ನೂ ಓದಿ: 

ಜಿಹಾದಿ ಅಫ್ತಾಬ್‌ನ ಮಾಸ್ಟರ್‌ಸ್ಟ್ರೋಕ್: ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾರ್ಕೋ‌ ಟೆಸ್ಟ್ ನಲ್ಲಿ ಅಫ್ತಾಬ್ ಮಾಡಿದ್ದೇನು ನೋಡಿ, ಕಂಗಾಲಾದ ಪೋಲಿಸ್ ಹಾಗು ಎಕ್ಸ್ಪರ್ಟ್‌ಗಳು

ಶ್ರದ್ಧಾ ಹ-ತ್ಯೆ ಪ್ರಕರಣದ ಆರೋಪಿ ಅಫ್ತಾಬ್‌ನ ಪಾಲಿಗ್ರಾಫ್ ಮತ್ತು ನಾರ್ಕೋ ಟೆಸ್ಟ್ ಮುಗಿದಿದೆ, ಆದರೆ ಪೊಲೀಸರಿಗೆ ಇನ್ನೂ ತೊಂದರೆ ಮುಗಿದಿಲ್ಲ. ಎರಡೂ ಪರೀಕ್ಷೆಗಳಲ್ಲಿ ಅಫ್ತಾಬ್ ವರ್ತನೆ ಬಗ್ಗೆ ತಜ್ಞರು ನೀಡಿದ ಉತ್ತರಗಳು ಪೊಲೀಸರನ್ನು ಕಂಗಾಲಾಗಿಸಿವೆ. ಎಫ್‌ಎಸ್‌ಎಲ್ ಮೂಲಗಳ ಪ್ರಕಾರ, ಪಾಲಿಗ್ರಾಫ್ ಮತ್ತು ನಾರ್ಕೊ ಪರೀಕ್ಷೆಯಲ್ಲಿನ ಮಾನಸಿಕ ವಿಭಾಗದ ತಜ್ಞರು ಅಫ್ತಾಬ್ ಸ್ಪ್ಲಿಟ್ ಪರ್ಸನಾಲಿಟಿ ವ್ಯಕ್ತಿತ್ವವನ್ನು ಹೊಂದಿರುವಂತೆ ನಟಿಸುತ್ತಿದ್ದಾನೆ ಎಂದು ಭಾವಿಸುತ್ತಾರೆ. ಏಕೆಂದರೆ ಎರಡೂ ಪರೀಕ್ಷೆಗಳ ಸಮಯದಲ್ಲಿ ಆತನ ನಡವಳಿಕೆಯು ಆ ತಜ್ಞರನ್ನು ಸಹ ಬೆಚ್ಚಿಬೀಳಿಸಿದೆ. ಮೂಲಗಳ ಪ್ರಕಾರ, ಪಾಲಿಗ್ರಾಫ್ ಮತ್ತು ನಾರ್ಕೊ ಟೆಸ್ಟ್ ನ ಸಮಯದಲ್ಲಿ ಆತನಿಗೆ ಪ್ರಶ್ನೆಗಳನ್ನು ಕೇಳಿದಾಗ, ಅಫ್ತಾಬ್ ಸ್ವತಃ ತನ್ನ ಪಾಲಿಗ್ರಾಫ್ ಮತ್ತು ನಾರ್ಕೋ ಟೆಸ್ಟ್ ಮಾಡಿಸಿಕೊಳ್ಳಲು ಬಯಸಿದ್ದನಂತೆ.

ಮೂಲಗಳ ಪ್ರಕಾರ, ಈ ಪ್ರಕರಣದ ಕುರಿತು ಎಫ್‌ಎಸ್‌ಎಲ್ ತಜ್ಞರೊಂದಿಗೆ ತನಿಖಾಧಿಕಾರಿ ಅಫ್ತಾಬ್ ಪರೀಕ್ಷೆಯ ಕುರಿತು ಮಾತನಾಡಿದ್ದಾರೆ. ತಜ್ಞರು ನೀಡಿದ ಮಾಹಿತಿಯಿಂದ ಪೊಲೀಸರೂ ಕಂಗಾಲಾಗಿದ್ದಾರೆ. ಏಕೆಂದರೆ ಅಫ್ತಾಬ್‌ನ ವರ್ತನೆಯನ್ನು ನೋಡಿದರೆ ಆತನೊಳಗೆ ಇಬ್ಬರು ವ್ಯಕ್ತಿಗಳಿದ್ದಾರೆ (split personality) ಎಂದು ತೋರುತ್ತದೆ ಎಂದು ಮಾನಸಿಕ ತಜ್ಞರು ಹೇಳಿದ್ದಾರೆ. ಇದನ್ನು ಮಾನಸಿಕ ಭಾಷೆಯಲ್ಲಿ ಸ್ಪ್ಲಿಟ್ ಪರ್ಸನಾಲಿಟಿ ಅಥವಾ ಡ್ಯುಯಲ್ ಪರ್ಸನಾಲಿಟಿ ಡಿಸಾರ್ಡರ್ ಎಂದು ಕರೆಯಲಾಗುತ್ತದೆ. ಅಫ್ತಾಬ್‌ನೊಳಗಿನ ಹಠಾತ್ ಬದಲಾವಣೆಯೇ ಇದಕ್ಕೆ ದೊಡ್ಡ ಕಾರಣ. ಪ್ರಶ್ನೆಗಳನ್ನು ಕೇಳಿದಾಗ, ಅವನು ಕೆಲವೊಮ್ಮೆ ತಾನು ಶ್ರದ್ಧಾಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳುತ್ತಾನೆ ಮತ್ತು ಅವಳನ್ನು ಕೊ-ಲ್ಲುವ ಬಗ್ಗೆ ಕೇಳಿದಾಗ, ನಾನು ಅವಳನ್ನು ತುಂಬಾ ದ್ವೇಷಿಸುತ್ತೇನೆ ಎಂದು ಹೇಳುತ್ತಾನೆ ಮತ್ತು ಆಕೆಯನ್ನ ಕೊಂ-ದಿದ್ದಕ್ಕೆ ಯಾವುದೇ ವಿಷಾದವಿಲ್ಲ ಎಂದು ಒಪ್ಪಿಕೊಳ್ಳುತ್ತಾನೆ.

ಒಂದು ವೇಳೆ ಆತನಿಗೆ ಈ ರೋಗವಿದ್ದರೆ ಶಿಕ್ಷೆಯಾಗಲ್ಲ

ಪೊಲೀಸ್ ಮೂಲಗಳ ಪ್ರಕಾರ, ಅಫ್ತಾಬ್‌ನ ಇದೇ ನಡವಳಿಕೆಯು ಪೋಲಿಸರಿಗೆ ದೊಡ್ಡ ತೊಂದರೆಗೆ ಕಾರಣವಾಗಿತ್ತು. ಏಕೆಂದರೆ ಅವನು ತಾನು ರಚಿಸಿದ್ದ ಕಥೆಯಲ್ಲೇ ಪೊಲೀಸರನ್ನು ಸುತ್ತಿಸುತ್ತಿದ್ದ ರೀತಿ. ಆ ನಂತರ ನ್ಯಾಯಾಲಯದಲ್ಲಿ ಸ್ಪ್ಲಿಟ್ ಪರ್ಸನಾಲಿಟಿ ಅಥವಾ ಮಲ್ಟಿ ಪರ್ಸನಾಲಿಟಿ ಡಿಸಾರ್ಡರ್ ವ್ಯಕ್ತಿತ್ವದಂತಹ ಮಾನಸಿಕ ಖಾಯಿಲೆಯನ್ನು ಸಾಬೀತುಪಡಿಸಿದರೆ ಪೊಲೀಸರಿಗೆ ಶಿಕ್ಷೆ ಕೊಡಿಸಲು ಕಷ್ಟವಾಗಬಹುದು. ಅಂತಹ ಮಾನಸಿಕ ಕಾಯಿಲೆ ಸಾಬೀತಾದರೆ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ಅಫ್ತಾಬ್‌ನ ಡಾಕ್ಟರ್ ಗರ್ಲ್‌ಫ್ರೆಂಡ್ ಕೂಡ ಈ ಕೊ-ಲೆಯ ಮಾಸ್ಟರ್‌ಮೈಂಡ್ ಆಗಿರಬಹುದೇ?

ಶ್ರದ್ಧಾ ಹ-ತ್ಯೆಯ ನಂತರ ಸ್ಪ್ಲಿಟ್ ಪರ್ಸನಾಲಿಟಿ ವ್ಯಕ್ತಿತ್ವದ ನಾಟಕವನ್ನು ಸೃಷ್ಟಿಸಲು ಅಫ್ತಾಬ್ ಕೊ-ಲೆಯಾದ 12 ದಿನಗಳ ನಂತರ ಬಂಬಲ್ ಆ್ಯಪ್ ಮೂಲಕ ಮನೋವೈದ್ಯೆಯನ್ನು ತನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದನೇ? ಹಾಗಾಗೇ ತನ್ನ ಚಿಕಿತ್ಸೆಗಾಗಿ ಆಕೆಯನ್ನ ಸಂಪರ್ಕಿಸಿದ್ದೇನೆ ಎಂದು ಆತ ನ್ಯಾಯಾಲಯದಲ್ಲಿ ಸಾಬೀತುಪಡಿಸಬಹುದು. ಆತನ ಹೇಳಿಕೆಯ ಆಧಾರದ ಮೇಲೆ, ಆತ ತುಂಬಾ ಸಾಮಾನ್ಯ ವ್ಯಕ್ತಿ ಆತ ಯಾರನ್ನೂ ಅಷ್ಟು ಕ್ರೂರವಾಗಿ ಕೊ-ಲ್ಲಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸಬಹುದು. ಪ್ರಸ್ತುತ, ಅಫ್ತಾಬ್‌ನನ್ನು ಗಲ್ಲಿಗೇರಿಸಲು ಸಾಂದರ್ಭಿಕ ಪುರಾವೆಗಳನ್ನು ಹೊರತುಪಡಿಸಿ ಯಾವುದೇ ದೃಢವಾದ ಪುರಾವೆಗಳು ಪೊಲೀಸರ ಬಳಿ ಇಲ್ಲ.

Advertisement
Share this on...