ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮೊಣಕಾಲು ನೋವಿಗೆ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೈದ್ಯರ ಹೆಸರು ವಂದನ್ ಸಿಂಗ್ ಖೇರ್ವಾರ್. ಖೇರ್ವಾರ್ ಅವರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಧೋನಿ ಸ್ವತಃ ಔಷಧಿಗಳನ್ನು ಪಡೆಯಲು ಇವರ ಆಶ್ರಮಕ್ಕೆ ಬರುತ್ತಾರೆ ಎಂದು ಹೇಳಿಕೊಂಡಿವೆ. ಈ ಆಶ್ರಮವು ಜಾರ್ಖಂಡ್ನ ರಾಜಧಾನಿ ರಾಂಚಿಯಿಂದ 70 ಕಿಮೀ ದೂರದಲ್ಲಿರುವ ಲಾಪುಂಗ್ ಅರಣ್ಯದಲ್ಲಿದೆ.
ಕಾಡಿನ ವೈದ್ಯರ ಬಳಿ ಹೋಗುತ್ತಾರೆ ಧೋನಿ
ಐಪಿಎಲ್ ನಂತರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇತ್ತೀಚಿನ ದಿನಗಳಲ್ಲಿ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರಾಂಚಿಯಲ್ಲಿ ವಿಶ್ರಾಂತಿ ಪಡೆಯತ್ತಿರುವ ಧೋನಿ, ರಾಂಚಿಯಲ್ಲಿಯೇ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಂಚಿಯಿಂದ ಸುಮಾರು 70 ಕಿಮೀ ದೂರದಲ್ಲಿರುವ ಲಾಪುಂಗ್ನಲ್ಲಿರುವ ಬಾಬಾ ಗಲ್ಗಾಲಿ ಧಾಮ್ನ ಕಟಿಂಗ್ಕೆಲಾದಲ್ಲಿ ವಾಸಿಸುವ ವಂದನ್ ಸಿಂಗ್ ಖೇರ್ವಾರ್ ಅವರಿಂದ ಧೋನಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರ ಪ್ರಕಾರ, ಮಾಹಿ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದೆ. ಈ ಕಾರಣದಿಂದಾಗಿ, ಅವರ ಮೊಣಕಾಲುಗಳು ನೋಯುತ್ತಿವೆ. ಧೋನಿ ಇಲ್ಲಿಯವರೆಗೆ ನಾಲ್ಕು ಡೋಸ್ ಔಷಧಿಯನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು. ಅವರು ಕೊನೆಯ ಬಾರಿಗೆ ಜೂನ್ 26, 2022 ರಂದು ಅವರ ಬಳಿಗೆ ಬಂದಿದ್ದರು. ಈ ಹಿಂದೆ ಧೋನಿಯ ಪೋಷಕರೂ ಈ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು ನಾಲ್ಕು ತಿಂಗಳ ಕಾಲ ಧೋನಿಯ ಪೋಷಕರು ವೈದ್ಯ ಔಷಧಿಯನ್ನು ತೆಗೆದುಕೊಂಡರು, ನಂತರ ಅವರ ಮೊಣಕಾಲು ನೋವು ಅತ್ಯಲ್ಪವಾಗಿತ್ತು. ಪೋಷಕರ ಯಶಸ್ವಿ ಚಿಕಿತ್ಸೆ ಬಳಿಕ ಧೋನಿ ಕೂಡ ಈ ವೈದ್ಯರ ಔಷಧಿ ಸೇವಿಸಲು ಆರಂಭಿಸಿದ್ದಾರೆ.
ವರದಿಗಳ ಪ್ರಕಾರ, ಧೋನಿ ಸ್ವತಃ ಕಾರನ್ನು ಓಡಿಸಿಕೊಂಡು ಔಷಧಿಯನ್ನು ಪಡೆಯಲು ವೈದ್ಯರ ಬಳಿಗೆ ಹೋಗುತ್ತಾರೆ. ಅಚ್ಚರಿಯ ವಿಷಯ ಏನಂದ್ರೆ ಈ ವೈದ್ಯರು ಚಿಕಿತ್ಸೆಗೆ ಕೇವಲ 20 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು 20 ರೂಪಾಯಿ ಔಷಧಿ ನೀಡುತ್ತಾರೆ. ಧೋನಿ ಸುಮಾರು ಒಂದು ತಿಂಗಳಿನಿಂದ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು (ಧೋನಿ) ಗಿಡಮೂಲಿಕೆಗಳ ಔಷಧ ಪಡೆಯಲು ಪ್ರತಿ 4 ದಿನಗಳಿಗೊಮ್ಮೆ ಅವರ ಆಶ್ರಮಕ್ಕೆ ಬರುತ್ತಾರೆ ಎನ್ನುತ್ತಾರೆ ವೈದ್ಯರು.
ವೈದ್ಯರು ಮಾತನಾಡುತ್ತ, “ಕಾಡಿನಲ್ಲಿ ಲಭ್ಯವಿರುವ ಗಿಡಮೂಲಿಕೆಗಳಿಂದ ಈ ಔಷಧಿಯನ್ನು ತಯಾರಿಸುತ್ತೇವೆ. ಮೊದಲ ಬಾರಿಗೆ ಧೋನಿ ನನ್ನ ಬಳಿಗೆ ಬಂದಾಗ, ನಾನು ಅವರನ್ನು ಗುರುತಿಸಲು ಸಹ ಸಾಧ್ಯವಾಗಲಿಲ್ಲ. ಜೊತೆಯಲ್ಲಿ ಬಂದವರು ನನಗೆ ಅವರನ್ನ ಪರಿಚಯಿಸಿದಾಗ ಟೀವಿಯಲ್ಲಿ ಬ್ಯಾಟ್ ಬೀಸುತ್ತಿರುವ ಧೋನಿ ಇವರೇಎಂದು ತಿಳಿಯಿತು” ಎಂದರು.
ಬಾಲ್ಯದಲ್ಲಿ ಪ್ರಧಾನಿ ಮೋದಿ ಚಹಾ ಮಾರಿದ್ದ ಜಾಗ?| Tea Stall where PM Modi Sold Tea |ತಿನ್ನಲು ಅನ್ನವಿಲ್ಲದೆ ಮಣ್ಣಿನ ರೊಟ್ಟಿ ತಿನ್ನುತ್ತಿದ್ದಾರೆ ಈ ದೇಶದ ಜನ | This country people eating Mud Rotis|Most Amazing 30 facts
Watch and Subscribe to the Channel to get such amazing facts
ಅವರು ಮುಂದೆ ಮಾತನಾಡುತ್ತ, “ಧೋನಿ ಔಷಧ ಪಡೆಯಲು ಇಲ್ಲಿಗೆ ಬಂದಾಗಲೆಲ್ಲಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಜನರ ದಂಡೇ ಇರುತ್ತದೆ. ಈ ಕಾರಣದಿಂದಲೇ ಹಲವು ಬಾರಿ ಇಲ್ಲಿಗೆ ಬಂದಾಗ ಕಾರಿನಿಂದ ಅವರು ಇಳಿಯುವುದಿಲ್ಲ. ಅವರಿಗೆ ಔಷಧಿಗಳನ್ನ ಅವರ ಕಾರಿಗೇ ತಲುಪಿಸಲಾಗುತ್ತದೆ. ಕಾರಿನಲ್ಲಿ ಕುಳಿತು ಧೋನಿ ಔಷಧಿ ಕುಡಿಯುತ್ತಾರೆ. ಇದಲ್ಲದೇ ಹಲವು ಬಾರಿ ಮೊಬೈಲ್ ಹಿಡಿದು ಗ್ರಾಮಸ್ಥರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯವನ್ನೂ ನೋಡಿದ್ದೇನೆ” ಎನ್ನುತ್ತಾರೆ ವೈದ್ಯ ವಂದನ್ ಸಿಂಗ್ ಖೇರ್ವಾರ್.
ಎಂಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿರಬಹುದು. ಆದರೆ ಐಪಿಎಲ್ನಲ್ಲಿ ಅವರ ಕ್ರಿಯಾಶೀಲತೆ ಮೊದಲಿನಂತೇ ಇನ್ನೂ ಇದೆ. ಇಂತಹ ಪರಿಸ್ಥಿತಿಯಲ್ಲಿ, ಐಪಿಎಲ್ 2023 ರ ಮೊದಲು, ಅವರ ಮೊಣಕಾಲು ನೋವು ಸಂಪೂರ್ಣವಾಗಿ ವಾಸಿಯಾಗುತ್ತದೆ ಮತ್ತು ಅಭಿಮಾನಿಗಳು ಧೋನಿ ಮೈದಾನದಲ್ಲಿ ಆಡುವುದನ್ನು ನೋಡಬಹುದು ಎಂದು ನಿರೀಕ್ಷಿಸಬಹುದು.