ಆಫ್ರಿಕಾ ಖಂಡವೂ ಆಗಿತ್ತು ಹಿಂದೂ ಸಾಮ್ರಾಜ್ಯ: ಆಫ್ರಿಕಾದಲ್ಲಿ ರಾಮನ ಮಕ್ಕಳ ಆಳ್ವಿಕೆ, ಸಿಕ್ಕವು ಮಹತ್ವದ ಸಾಕ್ಷ್ಯ

in Uncategorized 732 views

ಪುರಾತನ ಕುಶ್ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣವಾದ ಸುಮಾರು 2,700 ವರ್ಷಗಳ ಹಿಂದಿನ ದೇವಾಲಯದ ಅವಶೇಷಗಳನ್ನು ಪುರಾತತ್ತ್ವಜ್ಞರು (Ancestors Rising) ಕಂಡುಹಿಡಿದಿದ್ದಾರೆ. ಇಂದಿನ ಸುಡಾನ್, ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ವಿಶಾಲವಾಗಿ ಹರಡಿಕೊಂಡಿದ್ದ ಕುಶ್ ಸಾಮ್ರಾಜ್ಯಕ್ಕೂ ಭರತಭೂಮಿ ಭಾರತಕ್ಕೂ ಇರುವ ನಂಟಿನ ಕುರಿತು ನಿಮಗೆ ತಿಳಿದರೆ ನಿಜಕ್ಕೂ ಅಚ್ಚರಿಗೊಳ್ತೀರ!

Advertisement

ಆಧುನಿಕ ಸುಡಾನ್‌ನಲ್ಲಿ ನೈಲ್ ನದಿಯ ದಡದಲ್ಲಿ ಇರುವ ಓಲ್ಡ್ ಡೊಂಗೊಲಾದಲ್ಲಿನ ಮಧ್ಯಕಾಲೀನ ಕೋಟೆಯಲ್ಲಿ ದೇವಾಲಯದ ಅವಶೇಷಗಳು ಕಂಡುಬಂದಿವೆ. ದೇವಾಲಯದ ಕೆಲವು ಕಲ್ಲಿನ ಬ್ಲಾಕ್‌ಗಳನ್ನು ಆಕೃತಿಗಳು ಮತ್ತು ಚಿತ್ರಲಿಪಿ ಶಾಸನಗಳಿಂದ ಅಲಂಕರಿಸಲಾಗಿದೆ. ಪ್ರತಿಮಾಶಾಸ್ತ್ರ ಮತ್ತು ಲಿಪಿಯ ವಿಶ್ಲೇಷಣೆಯು ಈ ದೇವಾಲಯವು ಕ್ರಿಸ್ತಶಕ ಮೊದಲ ಶತಮಾನದ ಮೊದಲಾರ್ಧದಲ್ಲಿ ರಚನೆಯ ಭಾಗವಾಗಿದೆ ಎಂದು ಸೂಚಿಸುತ್ತದೆ.

ಎತ್ತಣಿಂದೆತ್ತ ಸಂಬಂಧ?

ಅರೇ! ಆಫ್ರಿಕಾದ ಸುಡಾನ್ ಮತ್ತಿತರ ದೇಶಕ್ಕೂ ಕೋಟ್ಯಂತರ ಹಿಂದೂಗಳ ಆರಾಧ್ಯದೈವ ಶ್ರೀ ರಾಮಚಂದ್ರನಿಗೂ ಎತ್ತಣಿಂದೆತ್ತ ಸಂಬಂಧ ಎಂದುಕೊಂಡ್ರಾ? ಅಲ್ಲೇ ಇದೆ ವಿಶೇಷ. ಭಗವಾನ್ ರಾಮನಿಗೆ ಲವ ಮತ್ತು ಕುಶ ಎಂಬ ಇಬ್ಬರು ಮಕ್ಕಳಿದ್ದರು. ರಾಮ ತನ್ನ ಇಬ್ಬರು ಮಕ್ಕಳಿಗೂ ಭೂಮಿಯ ಅರ್ಧರ್ಧ ಭಾಗವನ್ನು ಆಳಲು ನೀಡಿದ. ಆಫ್ರಿಕಾವು ಭಗವಾನ್ ರಾಮನ ಮಗನಾದ ಕುಶನ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿದ್ದು, ಅದನ್ನು ಕುಶದ್ವೀಪ ಎಂದು ಕರೆಯಲಾಯಿತು ಎಂದು ಪುರಾಣಗಳು ತಿಳಿಸುತ್ತವೆ.

ಆಫ್ರಿಕನ್ನರು ಕುಶೈಟ್ಸ್

ಪ್ರಾಚೀನ ವೈದಿಕ ನಂಬಿಕೆಗಳ ಪ್ರಕಾರ ಆಫ್ರಿಕಾವನ್ನು ಕುಶದೀಪ ಅಥವಾ ಕುಶದ್ವೀಪ ಎಂದು ಕರೆಯಲಾಗುತ್ತಿತ್ತು. ಸಂಸ್ಕೃತದಲ್ಲಿ ಕುಶ ಹುಲ್ಲು ಎಂದು ಕರೆಯಲ್ಪಡುವ ಎತ್ತರದ ಹುಲ್ಲಿನಿಂದ ಇಲ್ಲಿನ ವಿಸ್ತಾರವಾದ ಭೂಮಿ ಆವರಿಸಿತ್ತು. ರಾಮ ಮತ್ತು ರಾವಣರ ನಡುವಿನ ಯುದ್ಧದ ನಂತರ, ಖಂಡವು ರಾಮನ ಮಗ ಕುಶ ಅಥವಾ ಕುಶನ ಆಡಳಿತದಲ್ಲಿತ್ತು. ಆಫ್ರಿಕನ್ ಶಾಲಾ ಪಠ್ಯ ಪುಸ್ತಕಗಳು ಆಫ್ರಿಕನ್ನರನ್ನು ಕುಶೈಟ್ಸ್ ಎಂದು ವಿವರಿಸುತ್ತದೆ, ಮೇಲಿನ ಮಾಹಿತಿಗೆ ಸಾಕ್ಷಿಯಾಗಿದೆ.

ಸ್ವಾಮಿ ಕೃಷ್ಣಾನಂದರ ಅನುಭವ ಇದು

ಸ್ವಾಮಿ ಕೃಷ್ಣಾನಂದರು ಒಮ್ಮೆ ಅಬಿಸ್ಸಿನಿಯನ್ ದೊರೆ ಹೈಲೆ ಸೆಲಾಸಿಯನ್ನು ಭೇಟಿ ಮಾಡಿ ರಾಮಾಯಣದ ಪ್ರತಿಯನ್ನು ನೀಡಿದ್ದರು. ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ಅಬಿಸ್ಸಿನಿಯನ್ ದೊರೆ ಆಡಳಿತಗಾರರು ಪುಸ್ತಕದ ಬಗ್ಗೆ ಕೇಳಿಲ್ಲ ಎಂದು ಅವರು ಭಾವಿಸಿದ್ದರು. ಆದರೆ ರಾಜನ ಹೇಳಿಕೆಯನ್ನು ಕೇಳಿ ಸ್ವಾಮಿ ಕೃಷ್ಣಾನಂದರು ಆಶ್ಚರ್ಯಚಕಿತರಾದರು, “ಇದು ನಮಗೆ ಹೊಸದೇನಲ್ಲ. ನಾವು ಆಫ್ರಿಕನ್ನರು ಕುಶೈಟ್ಸ್. ಅಂದರೆ ಕುಶನ ಕುಲದವರು” ಎಂಬ ಅವರ ಉತ್ತರ ನಿಜಕ್ಕೂ ಸ್ವಾಮಿ ಕೃಷ್ಣಾನಂದರಿಗೆ ಆಶ್ಚರ್ಯ ಮೂಡಿಸಿತು.

ರಾಮ್ ಅಲ್ಲ ಹಾಮ್

ಪಠ್ಯ ಪುಸ್ತಕಗಳು ಆಫ್ರಿಕಾದ ಪ್ರಾಚೀನ ಕುಶ ಆಡಳಿತದ ಹೆಚ್ಚಿನ ಪುರಾವೆಗಳನ್ನು ಒದಗಿಸಿವೆ. ಆದರೆ ಪಠ್ಯ ಪುಸ್ತಕಗಳಲ್ಲಿ ಕುಶನ ತಂದೆಯನ್ನು ರಾಮನ ಬದಲಿಗೆ ಹಾಮ್ ಎಂದು ತಪ್ಪಾಗಿ ಉಲ್ಲೇಖಿಸಿವೆ.

ಯಾರು ಈ ಅಮುನ್-ರಾ?

ದೇವಾಲಯದ ಕೆಲವು ಅವಶೇಷಗಳ ಒಳಗೆ, ಪುರಾತತ್ತ್ವಜ್ಞರು ಶಾಸನಗಳ ತುಣುಕುಗಳನ್ನು ಕಂಡುಕೊಂಡಿದ್ದಾರೆ. ಇದರಲ್ಲಿ ದೇವಾಲಯವು ಕಾವಾದ ಅಮುನ್-ರಾಗೆ ಸಮರ್ಪಿತವಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಮುನ್-ರಾ ಎಂಬುದು ಕುಶ್ ಮತ್ತು ಈಜಿಪ್ಟ್‌ ಪ್ರಾಂತ್ಯದಲ್ಲಿ ಪೂಜಿಸಲ್ಪಟ್ಟ ದೇವರಾಗಿದೆ. ಕಾವಾ ಎಂಬುದು ಸುಡಾನ್‌ನ ಪುರಾತನ ದೇವಾಲಯಗಳನ್ನು ಹೊಂದಿರುವ ಪುರಾತತ್ತ್ವ ಶಾಸ್ತ್ರದ ಸ್ಥಳವಾಗಿದೆ. ಹೊಸದಾಗಿ ಪತ್ತೆಯಾದ ಬ್ಲಾಕ್‌ಗಳು ಈ ದೇವಾಲಯದ್ದೇ ಅಥವಾ ಅಸ್ತಿತ್ವದಲ್ಲಿರದ ಪುರಾತನ ದೇವಾಲಯದ್ದೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಎಂದು ಸಂಶೋಧನಾ ತಂಡದೊಂದಿಗೆ ಸಹಯೋಗ ಹೊಂದಿರುವ ಸಂಶೋಧಕ ಡೇವಿಡ್ ವಿಕ್ಜೋರೆಕ್ ಅವರು ಲೈವ್ ಸೈನ್ಸ್‌ಗೆ ತಿಳಿಸಿದ್ದಾರೆ.

Advertisement
Share this on...