ಬಿಜೆಪಿಯ ಜೈಶ್ರೀರಾಮ್, ಭಾರತ್ ಮಾತೆಯನ್ನು ತಮಿಳುನಾಡು ಯಾವತ್ತೂ ಒಪ್ಪುವುದಿಲ್ಲ ಎಂದು ಡಿಎಂಕೆ ಸಂಸದ ಎ ರಾಜಾ ಹೇಳಿದ್ದು, ಈ ಮೂಲಕ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಮಧುರೈನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎ ರಾಜಾ, ಸಭೆಯನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ನೀವು(ಬಿಜೆಪಿ) ಹೇಳುವ ದೇವರು ಜೈ ಶ್ರೀರಾಮ್, ಭಾರತ್ ಮಾತೆಯನ್ನು ನಾವು ಎಂದಿಗೂ ಒಪ್ಪಿಕೊಳ್ಳವುದಿಲ್ಲ, ತಮಿಳುನಾಡು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ರಾಮಾಯಾಣ, ಶ್ರೀರಾಮ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಮತ್ತಷ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನೀವು(ಬಿಜೆಪಿ) ಹೋಗಿ ಹೇಳಿ ನಾವು ರಾಮನ ಶತ್ರಗಳು. ನನಗೆ ರಾಮಾಯಾಣ, ರಾಮನ ಮೇಲೆ ಯಾವುದೇ ನಂಬಿಕೆ ಇಲ್ಲ. ರಾಮಾಯಣದಲ್ಲಿ ರಾಮನಿಗೆ ನಾಲ್ವರು ಸಹೋದರರು ಎಂದು ಹೇಳಿದ್ದಾರೆ. ಒಬ್ಬ ಕೌರವ ಸಹೋದರ, ಒಬ್ಬ ಬೇಟೆಗಾರ ಸಹೋದರ, ಮತ್ತೊಬ್ಬ ಕೋತಿ ಸಹೋದರ,ಇನ್ನೊಬ್ಬನ 6ನೇ ಸಹೋದರ ಕೋತಿ ಎಂದು ಹೇಳುತ್ತದೆ. ಇದನ್ನು ಮಾನವ ಸಾಮರಸ್ಯ ಎಂದು ನೀವು ಕರೆದರೆ, ಈ ಜೈ ಶ್ರೀರಾಮ್ ಛೀ, ಥೂ ಈಡಿಯೆಟ್ಸ್ ಎಂದು ಎ ರಾಜಾ ಹೇಳಿದ್ದಾರೆ.
ಮಾತು ಮುಂದುವರಿಸಿ ಭಾರತ ಒಂದು ದೇಶವಲ್ಲ ಎಂದಿದ್ದಾರೆ. ಭಾರತ ಯಾವತ್ತೂ ಒಂದು ದೇಶವಾಗಲು ಸಾಧ್ಯವಿಲ್ಲ. ಕಾರಣ ಒಂದು ದೇಶ ಎಂದರೆ ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಸಂಪ್ರದಾಯ, ಒಂದು ಪದ್ದತಿ ಇರಬೇಕು. ಆದರೆ ಭಾರತ ಹಾಗಲ್ಲ. ತಮಿಳುನಾಡಿನಲ್ಲಿ ಒಂದು ಭಾಷೆ ಇದೆ, ಒಂದು ಸಂಸ್ಕೃತಿ ಇದೆ, ತಮಿಳುನಾಡು ಒಂದು ದೇಶ, ಕೇರಳ ಒಂದು ದೇಶ. ಭಾರತ ಹೇಗೆ ಒಂದು ದೇಶ ಎಂದು ಎ ರಾಜಾ ಹೇಳಿದ್ದಾರೆ. ಈ ಮೂಲಕ ತಮಿಳುನಾಡು ಪ್ರತ್ಯೇಕ ರಾಷ್ಟ್ರ ಅನ್ನೋದನ್ನು ಸೂಚ್ಯವಾಗಿ ಹೇಳಿದ್ದಾರೆ.
ಎ ರಾಜಾ ಆಡಿರುವ ಮಾತುಗಳನ್ನು ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವಿಯಾ ಎಕ್ಸ್(ಟ್ವಿಟರ್) ಮೂಲಕ ಹಂಚಿಕೊಂಡಿದ್ದಾರೆ. ಇದೀಗ ಎ ರಾಜಾ ಮಾತುಗಳಿಗೆ ಬಿಜೆಪಿ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
If you say this is the God. If this is your Jai Sri Ram, if this is your Bharat Mata Ki Jai, we will never accept that Jai Sri Ram and Bharat Mata. Tamil Nadu won’t accept. You go and tell, we’re enemies of Ram.
I don’t have faith on Ramayana, and lord Ram. If you say that in… pic.twitter.com/EALfz8dgaM
— Amit Malviya (मोदी का परिवार) (@amitmalviya) March 5, 2024